ಜಿಯೋಗೆ ಸೆಡ್ಡು ಹೊಡೆದ ಏರ್ ಟೆಲ್ ► ಭರ್ಜರಿ ಆಫರ್ – ಗ್ರಾಹಕರಿಗೆ ಬಂಪರ್

(ನ್ಯೂಸ್ ಕಡಬ) newskadaba.com ನವದೆಹಲಿ, ಜ.24. ಏರ್ ಟೆಲ್ ಮತ್ತು ಜಿಯೋ ಮಧ್ಯೆ ಟೆಲಿಕಾಂ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಗ್ರಾಹಕರನ್ನು ಆಕರ್ಷಿಸಲು ಅದು ಇನ್ನಿಲ್ಲದ ಕಸರತ್ತು ನಡೆಸುತ್ತಿರುವುದರಿಂದ ಗ್ರಾಹಕ ಮಾತ್ರ ಸಂತೋಷದಿಂದಿದ್ದಾನೆ.

ಜಿಯೋಗೆ ಸಡ್ಡು ಹೊಡೆಯುವಂತೆ ಏರ್ ಟೆಲ್ ಇದೀಗ ತನ್ನ ಯೋಜನೆಯನ್ನು ನವೀಕರಿಸಿದ್ದು, ಆಯ್ದ ಗ್ರಾಹಕರಿಗೆ 149 ರೂ.ಗಳ ಯೋಜನೆಯಲ್ಲಿ ಅನಿಯಮಿತ ಸ್ಥಳೀಯ ಹಾಗೂ ಎಸ್‌ಟಿಡಿ ಕರೆಗಳೊಂದಿಗೆ ಪ್ರತಿದಿನ ನೂರು ಎಸ್‌ಎಂಎಸ್ ಉಚಿತವಾಗಿ ಸಿಗಲಿದೆ. 28 ದಿನಗಳ ವ್ಯಾಲಿಡಿಟಿಯೊಂದಿಗೆ 1 ಜಿಬಿ ಡಾಟಾ ಸಿಗಲಿದೆ. ಈ ಹಿಂದೆ ಏರ್‌ಟೆಲ್‌‌ ನಿಂದ ಏರ್‌ ಟೆಲ್‌‌ಗೆ ಮಾತ್ರ ಅನಿಯಮಿತ ಕರೆ ಸೌಲಭ್ಯ ನೀಡಿತ್ತು. ಇದೀಗ ಎಲ್ಲ ನೆಟ್‌ ವರ್ಕ್‌‌ ಗಳಿಗೂ ಅನಿಯಮಿತ ಕರೆ ಸಿಗಲಿದೆ. ಇದರ ಜತೆಗೆ 399 ಪ್ಲಾನ್‌‌ನಲ್ಲಿಯೂ ಏರ್‌ ಟೆಲ್‌‌ ಬದಲಾವಣೆ ಮಾಡಿದೆ.

Also Read  ಈ 8 ರಾಶಿಯವರಿಗೆ ಮದುವೆ ಯೋಗ ವ್ಯಾಪಾರ ದಾಂಪತ್ಯದಲ್ಲಿ ಹೊಂದಾಣಿಕೆ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಪಡೆದುಕೊಳ್ಳಿ

error: Content is protected !!
Scroll to Top