ಕಲ್ಲಾಪು: ಬೈಕ್ – ಲಾರಿ ಢಿಕ್ಕಿ ► ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜ.22. ಮೀನು ಸಾಗಾಟದ ಟೆಂಪೊವೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ತೊಕ್ಕೊಟ್ಟಿನ ಕಲ್ಲಾಪು ಸಮೀಪ ಸೋಮವಾರ ರಾತ್ರಿ ನಡೆದಿದೆ.

ಮೃತ ಯುವಕನನ್ನು ಅಂಬ್ಲಮೊಗರು ಸಮೀಪದ ಎಲಿಯಾರ್ ನಿವಾಸಿ ಬಶೀರ್ ಎಂಬವರ ಪುತ್ರ ಮುಹಮ್ಮದ್ ಶಾಕಿಬ್(19) ಎಂದು ಗುರುತಿಸಲಾಗಿದೆ. ಶಾಕಿಬ್ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಮೀನು ಸಾಗಾಟದ ಟೆಂಪೊ ಢಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.

Scroll to Top