ಮತ್ತೆ ಇನ್ಸ್ಟಾಗ್ರಾಮ್ ಸರ್ವರ್ ಡೌನ್

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 09. ಜನಪ್ರಿಯ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಸೇವೆಯಲ್ಲಿ ಮತ್ತೆ ವ್ಯತ್ಯಯ ಉಂಟಾಗಿದ್ದು, ಭಾರತ ಸೇರಿದಂತೆ ಜಗತ್ತಿನ ಇತರ ಕೆಲವು ಭಾಗಗಳಲ್ಲೂ ಮೆಟಾ ಒಡೆತನದ ಪ್ರಸಿದ್ಧ ಅಪ್ಲಿಕೇಷನ್ ಇನ್ಸ್ಟಾಗ್ರಾಮ್ ಸಮಸ್ಯೆಗಳನ್ನು ಎದುರಿಸುತ್ತಿದೆ.

ಈ ಕುರಿತು ಡೌನ್‌ ಡೆಕ್ಟರ್ ಹೇಳಿರುವ ಪ್ರಕಾರ, ಬಳಕೆದಾರರ ಪೈಕಿ 44 ಪ್ರತಿಶತದಷ್ಟು ಜನರು ಅಪ್ಲಿಕೇಶನ್ ನೊಂದಿಗೆ ಸಮಸ್ಯೆ ಎದುರಿಸುತ್ತಿದ್ದಾರೆ, 32 ಪ್ರತಿಶತದಷ್ಟು ಜನರು ವೆಬ್ ಆವೃತ್ತಿಯೊಂದಿಗೆ ಸಮಸ್ಯೆಗಳನ್ನು ಹೊಂದಿದ್ದಾರೆ ಮತ್ತು 24 ಪ್ರತಿಶತದಷ್ಟು ಜನರು ಸರ್ವರ್ ಸಂಪರ್ಕದಲ್ಲಿ ಸಮಸ್ಯೆಗಳನ್ನು ಹೊಂದಿದ್ದಾರೆ.

Also Read  ಉಕ್ರೇನ್ ನಲ್ಲಿ ಗುಂಡೇಟು ತಗುಲಿದ್ದ ವಿದ್ಯಾರ್ಥಿ ಇಂದು ಮರಳಿ ಭಾರತಕ್ಕೆ..!

error: Content is protected !!
Scroll to Top