ಕಡಬ ಪರಿಸರದಲ್ಲಿ ಹಲವು ಉದ್ಯೋಗಗಳು ➤ ಆಸಕ್ತರು ಸಂಪರ್ಕಿಸಿ

(ನ್ಯೂಸ್ ಕಡಬ) newskadaba.com ಕಡಬ, ಜೂ.09. ಕಡಬದ ಹಲವು ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದ್ದು, ಕಡಬದಲ್ಲಿ ಇನ್ನಿತರ ಸಂಸ್ಥೆಗಳಲ್ಲಿ ಉದ್ಯೋಗಕ್ಕಾಗಿ ನಿಮ್ಮ ಬಯೋಡಾಟವನ್ನು newskadaba@gmail.com ಗೆ ಇಮೇಲ್‌ ಮಾಡಿ.

ಮರ್ಧಾಳ ಸೈಂಟ್ ಮೇರಿಸ್ ಪ್ರೌಢಶಾಲೆಗೆ ಇಂಗ್ಲೀಷ್ ಭಾಷೆಗೆ ಶಿಕ್ಷಕರು ಬೇಕಾಗಿದ್ದು, ಬಿಎಡ್ ಜೊತೆಗೆ ಇಂಗ್ಲೀಷ್ ನಲ್ಲಿ ಬಿ.ಎ ಅಥವಾ ಎಂ.ಎ ಆಗಿರತಕ್ಕದ್ದು‌. ಮತ್ತು ಕಂಪ್ಯೂಟರ್ ಹಾಗೂ ಸ್ಪೋಕನ್ ಇಂಗ್ಲೀಷ್ ವಿಷಯಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಯಾವುದೇ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ತಿಳಿದಿರುವವರು ಅರ್ಜಿ ಸಲ್ಲಿಸಬಹುದಾಗಿದೆ‌. ಆಸಕ್ತರು ಜೂನ್ 25 ರ ಒಳಗೆ ತಮ್ಮ ಬಯೋಡೇಟಾವನ್ನು 8277199925 ಸಂಖ್ಯೆಗೆ ವಾಟ್ಸ್ಅಪ್ ಮೂಲಕ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 8277199925 ಫಾ. ಪೌಲ್ ಕೆ. ಬೆನ್ನಿ, ಸಂಚಾಲಕರು ಅಥವಾ 9483212333 ಈಶೋ ಫಿಲಿಪ್, ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಬಹುದು.

Also Read  ಸಂತಾನದಲ್ಲಿನ ಸಮಸ್ಯೆಯೇ? ದಿನ ಭವಿಷ್ಯ ನೋಡಿರಿ

ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘದ ಕಡಬ ಶಾಖೆಗೆ ಕಡಬ, ಸುಬ್ರಹ್ಮಣ್ಯ, ಪಂಜ ಭಾಗದಲ್ಲಿ ಸಂಸ್ಥೆಯ ನಿತ್ಯನಿಧಿ (ಪಿಗ್ಮಿ) ಸಂಗ್ರಹಣೆ ಮಾಡಲು ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ಆಸಕ್ತರು ಸಂಪರ್ಕಿಸಿ: 9972280664, 7338026535, 9448692507

ಕಡಬದ ರತ್ನಶ್ರೀ ಸೌಹಾರ್ದ ಸಹಕಾರಿ ನಿಯಮಿತ (ರಿ.) ಗೆ ಮ್ಯಾನೇಜರ್ ಹುದ್ದೆಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 15 ದಿನಗಳ ಒಳಗಾಗಿ ತಮ್ಮ ಬಯೋಡೇಟಾವನ್ನು ಖುದ್ದು ಕಛೇರಿಯಲ್ಲಿ ಅಥವಾ rathnashreesahakari@gmail.com ಗೆ ಕಳುಹಿಸುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9663125211

 

ನ್ಯೂಸ್ ಕಡಬ ಕಛೇರಿಯಲ್ಲಿ ಕೆಲಸ ಮಾಡಲು ಕನ್ನಡ ಟೈಪಿಂಗ್ ತಿಳಿದಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಬಯೋಡೇಟಾವನ್ನು newskadaba@gmail.com ಗೆ ಕಳುಹಿಸಬಹುದು. ಸಂಪರ್ಕ ಸಂಖ್ಯೆ: 9743493943

Also Read  ಈ ಪರಿಹಾರವನ್ನು ಮಾಡಿ ಪ್ರತಿಭೆಗೆ ಮುಕ್ತ ಅವಕಾಶವನ್ನು ಪಡೆಯಿರಿ ಮತ್ತು ದಿನಭವಿಷ್ಯ ನೋಡಿ

ಬೆಂಗಳೂರಿನಲ್ಲಿ ಆರಂಭವಾಗಲಿರುವ ಮೊಬೈಲ್ ಶೋರೂಮ್ ಗೆ ಅರ್ಹ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ‌. ಮೊಬೈಲ್ ಮಾರಾಟ ವಿಭಾಗದಲ್ಲಿ ಕನಿಷ್ಠ 3 ವರ್ಷ ಅನುಭವವಿರುವವರಿಗೆ ಆದ್ಯತೆ. ವಸತಿ ಸೌಕರ್ಯವಿದೆ. ಸಂಪರ್ಕಿಸಿ: 9481513253

error: Content is protected !!
Scroll to Top