ಓವರ್‌ಚಾರ್ಜ್‌ನಿಂದ ಇ–ರಿಕ್ಷಾ ಬ್ಯಾಟರಿ ಸ್ಪೋಟ.! ➤ ಮೂವರು ಮೃತ್ಯು

(ನ್ಯೂಸ್ ಕಡಬ) newskadaba.com ಲಕ್ನೋ,ಮೇ.13 ಮನೆಯಲ್ಲಿ ಚಾರ್ಜ್‌ಗೆ ಇಟ್ಟಿದ್ದ ಇ–ಆಟೋ ರಿಕ್ಷಾದ ಬ್ಯಾಟರಿ ಸ್ಫೋಟಗೊಂಡು ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಲಕ್ನೋದಲ್ಲಿ ನಡೆದಿರುವುದು ವರದಿಯಾಗಿದೆ.ಬಿಬಿಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಇ-ರಿಕ್ಷಾವೊಂದರ ಬ್ಯಾಟರಿಯು ಓವರ್‌ಚಾರ್ಜ್‌ನಿಂದ ಸ್ಫೋಟಗೊಂಡಿದೆ ಎಂದು ಪೂರ್ವ ಡಿಸಿಪಿ ಹಿರ್ದೇಶ್ ಕುಮಾರ್ ತಿಳಿಸಿದ್ದಾರೆ.

ಸ್ಫೋಟದ ಶಬ್ದವನ್ನು ಕೇಳಿ ಅಂಕಿತ್‌ ತನ್ನ ಮನೆಯೊಳಗೆ ಹೋಗಿದ್ದಾರೆ. ಈ ವೇಳೆ ಅಂಕಿತ್‌ ಅವರ ಪತ್ನಿ ರೇಣು ಮಗ ಕುಂಜ್, ಸೊಸೆ ರಿಯಾ ಸುಟ್ಟಗಾಯದಿಂದ ಬಿದ್ದಿರುವುದನ್ನು ನೋಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ವೇಳೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Also Read  ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ     ಲೋಪದೋಷ ಸರಿಪಡಿಸುವಂತೆ ಸುಪ್ರೀಂ ಸೂಚನೆ            

 

 

 

 

error: Content is protected !!
Scroll to Top