(ನ್ಯೂಸ್ ಕಡಬ)Newskadaba.com ಹೈದ್ರಾಬಾದ್,ಮೇ.02 ಹೈದ್ರಾಬಾದ್ ನಲ್ಲಿ ಅಸ್ತಮಾ ಖಾಯಿಲೆಗೆ ವಿಶಿಷ್ಟ ಮದ್ದಿದೆ. ಪ್ರತಿಬಾರಿ ಮೃಗಶಿರ ಕಾರ್ತಿ ಸಂದರ್ಭದಲ್ಲಿ ವಿಶೇಷ ಮೀನಿನ ಪ್ರಸಾದವನ್ನು ವಿತರಿಸಲಾಗುತ್ತದೆ. ಇದನ್ನು ಸೇವಿಸಿದ್ರೆ ಅಸ್ತಮಾ ರೋಗ ಸಂಪೂರ್ಣ ಗುಣವಾಗುತ್ತದೆ ಎಂಬ ನಂಬಿಕೆ ಇದೆ.ಬತ್ತನಿ ಕುಟುಂಬದವರು ಕಳೆದ 172 ವರ್ಷಗಳಿಂದ ಈ ಪ್ರಸಾದವನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ.
ದೇಶದ ದೂರ ದೂರದ ಪ್ರದೇಶಗಳಿಂದ್ಲೂ ಅಸ್ತಮಾ ರೋಗಿಗಳು ಪ್ರಸಾದ ಸ್ವೀಕರಿಸಲು ಬರುತ್ತಾರೆ. ಮೊದಲ ಬಾರಿ ಪ್ರಸಾದ ಸೇವಿಸಿದ ಮೇಲೆ ಖಾಯಿಲೆ ಸ್ವಲ್ಪ ಮಟ್ಟಿಗೆ ವಾಸಿಯಾಗಿದೆ ಎನಿಸಿದವರೆಲ್ಲ ಮತ್ತೆ ಮತ್ತೆ ಬರುತ್ತಿರುತ್ತಾರೆ.ಇನ್ನು ಕೆಲವರು ಈ ಮೀನಿನ ಪ್ರಸಾದದ ಚಮತ್ಕಾರದ ಬಗ್ಗೆ ಕೇಳಿ ತಿಳಿದುಕೊಂಡು, ಅದರ ಅನುಭವ ಪಡೆಯಲೆಂದೇ ಬರುತ್ತಾರೆ. ಆದ್ರೆ ಎಂಥೆಂಥಾ ಔಷಧಗಳಿಂದ್ಲೂ ಗುಣವಾಗದ ಅಸ್ತಮಾ, ಕೇವಲ ಒಂದು ಪ್ರಸಾದದಿಂದ ಕಡಿಮೆಯಾಗೋದು ನಿಜಕ್ಕೂ ಪವಾಡ ಎನ್ನುತ್ತಾರೆ ಜನ.