ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆ ➤ಬಿಜೆಪಿ ಪ್ರಣಾಳಿಕೆ ಬಿಡುಗಡೆ ವೇಳೆ BSY ಸಿಡಿಮಿಡಿ

(ನ್ಯೂಸ್ ಕಡಬ) newskadaba.com, ಬೆಂಗಳೂರು, ಮೇ.2.  ರಾಜ್ಯ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ವರ್ಷಕ್ಕೆ ಮೂರು ಉಚಿತ ಗ್ಯಾಸ್ ಸಿಲಿಂಡರ್, ಉಚಿತ ಪಡಿತರ ಸೇರಿದಂತೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದೆ.

ಬಿಜೆಪಿ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ ನಡೆಯುವ ವೇಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೊಂಚ ಗರಂ ಆಗಿಯೇ ಇದ್ದು, ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದ್ದ ಕೆಲವೊಂದು ವಿಷಯಗಳ ಕುರಿತು ಅವರಿಗೆ ಸಮಾಧಾನವಾಗಿರಲಿಲ್ಲವೆಂದು ಹೇಳಲಾಗಿದೆ.

ಉಚಿತ ಪಡಿತರ 10 ಕೆಜಿ ಅಕ್ಕಿಯನ್ನು ಉಲ್ಲೇಖಿಸುವಂತೆ ಯಡಿಯೂರಪ್ಪನವರು ಸೂಚಿಸಿದ್ದರು ಎನ್ನಲಾಗಿದ್ದು, ಆದರೆ 5 ಕೆಜಿ ಮಾತ್ರ ಉಲ್ಲೇಖಿಸಲಾಗಿತ್ತು. ಹೀಗಾಗಿಯೇ ಯಡಿಯೂರಪ್ಪನವರು ಸಿಡಿಮಿಡಿ ಇಂದಲೇ ಇದ್ದರು ಎನ್ನಲಾಗಿದೆ.

ಬಳಿಕ ಸಚಿವ ಆರ್ ಅಶೋಕ್, 5 ಕೆಜಿ ಅಕ್ಕಿ ಜೊತೆ 5 ಕೆಜಿ ಸಿರಿಧಾನ್ಯವನ್ನು ಸೇರಿಸಿರುವ ವಿಷಯ ಯಡಿಯೂರಪ್ಪನವರಿಗೆ ತಿಳಿಸಿದಾಗ ಕೊಂಚ ಸಮಾಧಾನಗೊಂಡರು ಎಂದು ಹೇಳಲಾಗಿದೆ. ಆದರೂ ಕೂಡ ತಮ್ಮ ಪ್ರಸ್ತಾಪವನ್ನು ಸಂಪೂರ್ಣವಾಗಿ ಸ್ವೀಕರಿಸದ್ದಕ್ಕೆ ಯಡಿಯೂರಪ್ಪ ಗರಂ ಆಗಿಯೇ ಇದ್ದಿದ್ದು ಕಂಡು ಬಂತು.

Scroll to Top