ಮಗಳನ್ನು ಕಂಡು ಬೊಗಳಿದ ನಾಯಿಯ ಮೇಲೆ ಮಾರಣಾಂತಿಕ ದಾಳಿ ಮಾಡಿದ ವ್ಯಕ್ತಿ! ➤ಇಬ್ಬರ ವಿರುದ್ಧ ಪ್ರಕರಣ ದಾಖಲು

(ನ್ಯೂಸ್ ಕಡಬ)Newskadaba.com ಉತ್ತರ ಪ್ರದೇಶ,ಏ.28 ತಮ್ಮ ಮಗಳನ್ನು ಕಂಡು ಬೊಗಳಿದ ಕಾರಣಕ್ಕೆ ಪಿಟ್‌ಬುಲ್ ನಾಯಿಯೊಂದರ ಮೇಲೆ ಮಾರಣಾಂತಿಕ ದಾಳಿ ಮಾಡಿದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ನೋಮನ್ ಹಾಗೂ ಇಮ್ರಾನ್ ಹೆಸರಿನ ಈ ಇಬ್ಬರು ನಾಯಿಯ ಮೇಲೆ ನಿರ್ದಯವಾಗಿ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಮುಂದಾದ ನಾಯಿಯ ಮಾಲೀಕರ ಮೇಲೂ ದಾಳಿ ಮಾಡಲು ಮುಂದಾಗಿದ್ದಾರೆ ಈ ಕ್ರೂರಿಗಳು. ಪ್ರಕರಣದ ತನಿಖೆ ಜಾರಿಯಲ್ಲಿದ್ದು, ಘಟನೆ ಸಂಬಂಧ ಇಬ್ಬರನ್ನು ಬಂಧಿಸಿದ್ದೇವೆ,” ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

Also Read  ಸೆಲೆಬ್ರಿಟಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಉಪಯೋಗಿಸಿದ ಆರೋಪ ➤ ಕಡಬದ ಯುವಕನಿಗೆ ಪಶ್ಚಿಮ ಬಂಗಾಳ ನ್ಯಾಯಾಲಯದಿಂದ ಜಾಮೀನು

 

 

error: Content is protected !!
Scroll to Top