ಕ್ರೂರವಾಗಿ ಮೂರು ಮೇಕೆಗಳನ್ನು ಬಲಿ ನೀಡಿದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com. ಚಿತ್ರದುರ್ಗ, ಏ.27. ಜಿಲ್ಲೆಯ ಪರಶುರಾಂಪುರ ಗ್ರಾಮದಲ್ಲಿ ಯುಗಾದಿ ಹಬ್ಬದ ವೇಳೆ ಸಾರ್ವಜನಿಕರ ಕಣ್ಣಿಗೆ ಕಾಣುವಂತೆ ಬಹಿರಂಗವಾಗಿ ಮೂರು ಮೇಕೆಗಳನ್ನು ಬಲಿ ನೀಡಿದ್ದ ವ್ಯಕ್ತಿಯೊಬ್ಬನ ವಿರುದ್ಧ ಚಿತ್ರದುರ್ಗ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿಕೊಂಡಿದ್ದಾರೆ.

ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಭಯ ಭೀತಿಗೊಳಗಾದ ಮೂರು ಮೇಕೆಗಳ ಮುಂದೆ ನಿಂತು ಆರೋಪಿ ಕತ್ತಿಯಂತಹ ಆಯುಧದಿಂದ ಒಂದರ ಹಿಂದೆ ಒಂದರಂತೆ ಮೂರೂ ಮೇಕೆಗಳ ತಲೆ ಕಡಿದಿರುವ ಘಟನೆಯನ್ನು ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ಪೇಟಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Scroll to Top