ಬಂಟ್ವಾಳ:  ದಾಖಲೆ ರಹಿತ ನಗದು ಸಾಗಾಟ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಏ.26. ಫರಂಗಿಪೇಟೆ ಚೆಕ್ ಪೋಸ್ಟ್ ನಲ್ಲಿ ಚುನಾವಣಾ ತಪಾಸಣೆ ನಡೆಯುತ್ತಿದ್ದ ಸಂದರ್ಭ ವಾಹನ ತಪಾಸಣೆ ವೇಳೆ ದಾಖಲೆ ರಹಿತ ನಗದು ಸಾಗಾಟ ಪ್ರಕರಣ ಪತ್ತೆಯಾಗಿದೆ.

ಒಟ್ಟು 3 ಲಕ್ಷ ರೂ ವಾಹನದಲ್ಲಿದ್ದು, ಈ ಕುರಿತು ವಾಹನದವರಲ್ಲಿ ದಾಖಲೆ ಕೇಳಿದಾಗ ಸಮರ್ಪಕ ಉತ್ತರ ದೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ ತಪಾಸಣಾಧಿಕಾರಿಗಳು ನಗದನ್ನು ವಶಪಡಿಸಿಕೊಂಡಿದ್ದಾರೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದ ವೇಳೆ ನಗದು ಕಂಡುಬಂದಿದ್ದು, ಕೂಡಲೇ ಅದನ್ನು ಚುನಾವಣಾ ಸಂಬಂಧಿ ಪರಿಶೀಲನಾ ಸಮಿತಿಗೆ ಹಸ್ತಾಂತರಿಸಿದ್ದು, ತನಿಖೆ ನಡೆಯುತ್ತಿದೆ.

Also Read  ಪಂಜ : ಗ್ರಾಮ ಪಂಚಾಯತ್ ಮತದಾನ ಜಾಗೃತಿಗಾಗಿ ಬೀದಿನಾಟಕ

 

 

error: Content is protected !!