ಕಡಬ: ಆಸ್ಪತ್ರೆಯ ಮುಂಭಾಗವೇ ಗಂಡು ಮಗುವಿಗೆ ಜನ್ಮವಿತ್ತ ತಾಯಿ

(ನ್ಯೂಸ್ ಕಡಬ)newskadaba.com  ಕಡಬ, ಮಾ.25. ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಆಟೋ ರಿಕ್ಷಾದಲ್ಲೇ ಗಂಡು ಮಗುವಿಗೆ ತಾಯಿ ಜನ್ಮವಿತ್ತ  ಅಪರೂಪದ ಘಟನೆ ಕಡಬದಲ್ಲಿ ವರದಿಯಾಗಿದೆ.

ಆಲಂಕಾರು ಸಮೀಪದ ಮಣಿಕ್ಕಲದ  ಗರ್ಭಿಣಿ ಮಹಿಳೆ ತನ್ನ ಪತಿ ಜೊತೆ  ಬಲ್ಯದ  ತನ್ನ ಕುಟುಂಬಸ್ಥರ ಮನೆಗೆ ಬಂದಿದ್ದರು. ಸಾಯಂಕಾಲದ ವೇಳೆ ಅವರಿಗೆ ಆರೋಗ್ಯದಲ್ಲಿ ಬದಲಾವಣೆ ಕಂಡು ಬಂದಿತ್ತು.

ತಕ್ಷಣ ಆರೋ ರಿಕ್ಷಾದಲ್ಲಿ ಕಡಬದ ಸಮುದಾಯ ಆಸ್ಪತ್ರೆಗೆ  ಕರೆದುಕೊಂಡು ಬಂದಿದ್ದು, ಆಸ್ಪತ್ರೆ ಮುಂಭಾಗಕ್ಕೆ ತಲುಪುತ್ತಿದ್ದಂತೆ ತಾಯಿ ಮಗುವಿಗೆ ಜನ್ಮನೀಡಿದ್ದಾರೆ. ಕೂಡಲೇ ಆಸ್ಪತ್ರೆ ಸಿಬ್ಬಂದಿಗಳು ಸೂಕ್ತ ವ್ಯವಸ್ಥೆ ಕಲ್ಪಿಸಿದ್ದು ತಾಯಿ ಮಗು ಆರೋಗ್ಯವಾಗಿರುವುದಾಗಿ ತಿಳಿದು ಬಂದಿದೆ.

 

 

Scroll to Top