(ನ್ಯೂಸ್ ಕಡಬ) newskadaba.com. ಮಂಗಳೂರು. ಮಾ 11. ನಗರದಿಂದ ಗ್ಯಾಸ್ ಟ್ಯಾಂಕರ್ ಹೊತ್ತೊಯ್ಯುತ್ತಿದ್ದ ರೈಲಿನಲ್ಲಿ ಗ್ಯಾಸ್ ಸೋರಿಕೆಯುಂಟಾಗಿರುವ ಶಂಕೆ ವ್ಯಕ್ತವಾಗಿದೆ. ಹೆಚ್ ಪಿ ಸಿ ಎಲ್ ನಿಂದ ರೈಲಿನ ಮೂಲಕ ಗ್ಯಾಸ್ ರವಾನೆಯಾಗುತ್ತಿದ್ದ ವೇಳೆ ಸೋರಿಕೆಯ ಆತಂಕ ಎದುರಾಗಿದೆ.
7 ಕಿಲೋಮೀಟರ್ ತೆರಳಿದ ಬಳಿಕ ಸೋರಿಕೆ ಮಾಹಿತಿ ಲಭಿಸಿದೆ. ಮಾಹಿತಿ ತಿಳಿದ ತಕ್ಷಣ ಹೆಚ್ ಪಿ ಸಿ ಎಲ್ ಗೆ ಗ್ಯಾಸ್ ಟ್ಯಾಂಕರ್ ರೈಲು ಹಿಂತಿರುಗಿದೆ. ಜೋಕಟ್ಟೆ ಗ್ರಾಮದ ಬಳಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ರೈಲ್ವೇ ಗೇಟ್ ಬಳಿ ಅಗ್ನಿಶಾಮಕದಳ ನಿಯೋಜನೆ ಮಾಡಲಾಗಿದೆ. ರೈಲ್ವೇ ಹಳಿ ಪಕ್ಕ ಜನರು ಬಾರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಗ್ಯಾಸ್ ಲೀಕೇಜ್ ಸುದ್ದಿಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.