ಬಸ್ಸಿನ ಅಡಿಗೆ ಬಿದ್ದರೂ ಪವಾಡ ಸದೃಶ ಪಾರಾದ ಮಹಿಳೆ ► ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

 

 

(ನ್ಯೂಸ್ ಕಡಬ) newskadaba.com ಮಡಿಕೇರಿ, ಜು.16. ಬೈಕ್ ಸವಾರನೋರ್ವ ಹಿಂದುಗಡೆಯಿಂದ ಬರುತ್ತಿದ್ದ ಬಸ್ಸನ್ನು ನೋಡದೆ ಹಠಾತ್ತನೆ ಬಲಗಡೆಗೆ ತಿರುಗಿಸಿದ ಪರಿಣಾಮ ಹಿಂಬದಿ ಸವಾರೆ ಮಹಿಳೆಯೋರ್ವರು ಬಸ್ಸಿನಡಿಗೆ ಬಿದ್ದರೂ ಬಸ್ ಚಾಲಕನ ಸಮಯಪ್ರಜ್ಞೆಯಿಂದಾಗಿ ಅಪಾಯದಿಂದ ಪಾರಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಗುಡ್ಡೆಹೊಸೂರು ಬಳಿ ಬೈಕ್ ಸವಾರ ತಿರುಗಿಸಿದ್ದರಿಂದಾಗಿ ಬೈಕ್ ಸವಾರ ರಸ್ತೆಗೆ ಬಿದ್ದಿದ್ದು, ಮಹಿಳೆ ಚಕ್ರದ ಮಧ್ಯ ಬಿದ್ದಿದ್ದಾರೆ‌. ಬಸ್ ಚಾಲಕನ ಸಮಯಪ್ರಜ್ಞೆಯಿಂದ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ‌.

Scroll to Top