ಬಾಂಬ್ ಸ್ಫೋಟ ➤ ತಾಲಿಬಾನ್ ಗವರ್ನರ್ ಸೇರಿ ಮೂವರು ಮೃತ್ಯು

(ನ್ಯೂಸ್ ಕಡಬ) newskadaba.com ಕಾಬೂಲ್‌, ಮಾ. 10. ಅಫ್ಘಾನಿಸ್ತಾನದ ಮಜಾರ್‌-ಇ-ಷರೀಫ್ ಪ್ರದೇಶದಲ್ಲಿ ಬಾಂಬ್ ಸ್ಪೋಟ ಸಂಭವಿಸಿದ ಪರಿಣಾಮ ಪ್ರಾಂತೀಯ ಗವರ್ನರ್ ದಾವೂದ್‌ ಮುಜ್ಮಲ್‌ ಸಹಿತ ಮೂವರು ಮೃತಪಟ್ಟ ಘಟನೆ ವರದಿಯಾಗಿದೆ. ಸ್ಪೋಟದ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಾಲಿಬಾನ್ ವಿರೋಧಿ ಉಗ್ರ ಸಂಘಟನೆ ಇಸ್ಲಾಮಿಕ್‌ ಸ್ಟೇಟ್ಸ್ ನ ಖೊರಾಸನ್‌ ಘಟಕವು ಸ್ಪೋಟ ನಡೆಸಿರಬಹುದು ಎಂದು ಶಂಕಿಸಲಾಗಿದೆ ಎಂದು ತಾಲಿಬಾನ್‌ ಮುಖ್ಯ ವಕ್ತಾರ ಜಬೀಬುಲ್ಲಾ ಮುಜಾಹಿದ್‌ ತಿಳಿಸಿರುವುದಾಗಿ ವರದಿಯಾಗಿದೆ.

Also Read  ಮಂಗಳೂರು: ಮತ್ತೆ ಮುಂದುವರಿದ ನೈತಿಕ ಪೊಲೀಸ್ ಗಿರಿ ➤ ಆರು ಜನರ ಬಂಧನ

error: Content is protected !!
Scroll to Top