ರಂಜಾನ್ ಹಿನ್ನೆಲೆ- ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಅವಕಾಶ ಕೊಡಿ ➤ ಮುಸ್ಲಿಂ ಮುಖಂಡರ ಮನವಿ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಮಾ. 07. ರಂಜಾನ್​ ಉಪವಾಸ ಆರಂಭವಾಗಲಿದ್ದು, ಜಿಲ್ಲೆಯ ಮಸೀದಿಗಳಲ್ಲಿ ಬೆಳಗಿನ ಜಾವ 5 ರಿಂದ 5:30 ರವರೆಗೆ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ನೀಡಬೇಕೆಂದು ಮುಸ್ಲಿಂ ಮುಖಂಡರು ಜಿಲ್ಲಾಧಿಕಾರಿ ಹಾಗೂ ಶಾಸಕ ಸಿ.ಟಿ ರವಿಯವರಿಗೆ ಮನವಿ ಮಾಡಿದ್ದಾರೆ.

ಮಾ. 22 ರಿಂದ ರಂಜಾನ್ ಉಪವಾಸ ಆರಂಭವಾಗಲಿದ್ದು, ಮುಸ್ಲಿಮರಿಗೆ ಆಝಾನ್ ಕೂಡ ರಂಜಾನ್ ಆಚರಣೆಯ ಒಂದು ಭಾಗವಾಗಿದೆ. ಹೀಗಾಗಿ ರಂಜಾನ್ ಉಪವಾಸ ನಡೆಯುವ ಒಂದು ತಿಂಗಳ ಕಾಲ ಬೆಳಗ್ಗಿನ ಅಝಾನ್‌ ಧ್ವನಿವರ್ಧಕದಲ್ಲಿ ನೀಡಲು ಅವಕಾಶ ನೀಡಬೇಕು ಎಂದು ಮುಸ್ಲಿಂ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.

Also Read  ಬಟ್ಟೆಯನ್ನು ನುಂಗಿದ ನಾಗರಹಾವು..!! ➤ ಸುರಕ್ಷಿತವಾಗಿ ಹೊರತೆಗೆದು ಕಾಡಿಗೆಬಿಟ್ಟ ಸ್ನೇಕ್ ಅಶೋಕ್

error: Content is protected !!
Scroll to Top