ಬೈಕ್- ಓಮ್ನಿ ನಡುವೆ ಅಪಘಾತ ➤ ಹಿರಿಯ ಯಕ್ಷಗಾನ ಕಲಾವಿದ ಮೃತ್ಯು..!

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಜ. 20. ಒಮ್ನಿ ಹಾಗೂ ಬೈಕ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಹಿರಿಯ ಯಕ್ಷಗಾನ ಕಲಾವಿದ ಓರ್ವರು ಮೃತಪಟ್ಟ ಘಟನೆ ಮೂಡಬಿದಿರೆಯ ಗಂಟಾಲ್ಕಟ್ಟೆ ಎಂಬಲ್ಲಿ ನಡೆದಿದೆ.

ಮೃತರನ್ನು ಯಕ್ಷಗಾನ ಕಲಾವಿದ ವಾಮನ ಕುಮಾರ್ ವೇಣೂರು ಎಂದು ಗುರುತಿಸಲಾಗಿದೆ. ಇವರು ಕುಂದಾಪುರದಲ್ಲಿ ಯಕ್ಷಗಾನ ಮುಗಿಸಿ ಬೈಕ್ ನಲ್ಲಿ ಹಿಂತಿರುಗುತ್ತಿದ್ದ ವೇಳೆ ಒಮ್ನಿಗೆ ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇಪ್ಪತ್ತಾರು ವರ್ಷಗಳ ಅನುಭವಿ ಕಲಾವಿದರಾಗಿದ್ದ ಇವರು ಸ್ತ್ರೀ, ಪುರುಷ, ಹಾಸ್ಯ, ಪುಂಡು ಹೀಗೆ ಹಲವು ಪಾತ್ರಗಳನ್ನು ಮಾಡಿ ಅಭಿಮಾನಿಗಳ ಮನಗೆದ್ದಿದ್ದರು.

 

 

Scroll to Top