(ನ್ಯೂಸ್ ಕಡಬ) newskadaba.com. ಮಹಾರಾಷ್ಟ್ರ. ಮಾ.02. ಮಹಾರಾಷ್ಟ್ರದ ಜಾನಕಿ ವೃದ್ಧಾಶ್ರಮದಲ್ಲಿ ಹುಟ್ಟಿದ ಅಪರೂಪದ ಪ್ರೇಮ ಕಥೆ. ತನ್ನ ಪತ್ನಿಯನ್ನು ಕಳೆದುಕೊಂಡು ಕಳೆದ ಕೆಲ ವರ್ಷಗಳಿಂದ ಜಾನಕಿ ವೃದ್ಧಾಶ್ರಮದಲ್ಲಿ ವಾಸವಿದ್ದ ಬಾಬುರಾವ್ ಪಾಟೀಲ್ ಮತ್ತು ಅದೇ ವೃದ್ಧಾಶ್ರಮದಲ್ಲಿ ವಾಸವಿದ್ದ 70ರ ಅನಸೂಯ ಶಿಂಧೆ ಮದುವೆಯಾಗಿದು, ಒಂಟಿತನವನ್ನು ದೂರಮಾಡಿದ್ದಾರೆ.
ಈ ಇಬ್ಬರ ಮದುವೆಯನ್ನು ಆಶ್ರಮದಲ್ಲೇ ಎಲ್ಲರೂ ಸೇರುಕೊಂಡು ಮಾಡಿದ್ದಾರೆ. ಹಿರಿ ವಯಸ್ಸಿನಲ್ಲಿ ಪರಸ್ಪರ ಜೊತೆಯಾಗಿ ಇರುವ ಕಾರಣದಿಂದ ಮದುವೆಯಾಗಿದ್ಧೇವೆ ಎನ್ನುವುದು ನೂತನ ದಂಪತಿಯ ಮಾತು.