ಉಪ್ಪಿನಂಗಡಿ: ಮೊಬೈಲ್ ಅಂಗಡಿ ಮೇಲೆ ಪೊಲೀಸ್ ದಾಳಿ ➤ ಇ-ಸಿಗರೇಟ್ ವಶಕ್ಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ. 26. ಇ- ಸಿಗರೇಟ್‌ ಮಾರಾಟ ಮಾಡುತ್ತಿದ್ದ ಮೊಬೈಲ್‌ ಅಂಗಡಿಯೊಂದಕ್ಕೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಈ ಕುರಿತು ಖಚಿತ ಮಾಹಿತಿಯಾಧಾರದ ಮೇಲೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಹಾಗೂ ಉಪ್ಪಿನಂಗಡಿ ಪೊಲೀಸ್‌ ಠಾಣಾ ಉಪನಿರೀಕ್ಷಕ ರಾಜೇಶ್‌ ಕೆ.ವಿ. ತಂಡವು ಹಳೆ ಬಸ್‌ ನಿಲ್ದಾಣದ ಸಮೀಪದ ಪೃಥ್ವಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ 4U ಬೆಸ್ಟ್ ಸರ್ವಿಸ್ ಎಂಬ ಮೊಬೈಲ್ ಅಂಗಡಿಗೆ ದಾಳಿ ನಡೆಸಿ, ವಿವಿಧ ಫ್ಲೇವರ್‌‌ನ 26,000 ರೂ. ಮೌಲ್ಯದ ಒಟ್ಟು 52 ನಿಷೇಧಿತ ಇ-ಸಿಗರೇಟ್‌ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top