➤ ಟಾಲಿವುಡ್ ನ ಯುವ ನಟ ಸುಧೀರ್ ವರ್ಮ’ಆತ್ಮಹತ್ಯೆ!

(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ. 23.  ಟಾಲಿವುಡ್ ಯುವ ನಟ ಸುಧೀರ್ ವರ್ಮ ವೈಯಕ್ತಿಕ ಸಮಸ್ಯೆಗಳಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗ್ತಿದೆ. ಈ ಘಟನೆ ಸೋಮವಾರ ವಿಶಾಖಪಟ್ಟಣದಲ್ಲಿ ನಡೆದಿದೆ.  ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

2013ರಲ್ಲಿ ಕಿಶೋರ್ ತಿರುಮಲ ನಿರ್ದೇಶನದ ಸೆಕೆಂಡ್ ಹ್ಯಾಂಡ್ ಸಿನಿಮಾ ಸುಧೀರ್ ವರ್ಮಾಗೆ ನಾಯಕನಾಗಿ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಸಂತೋಷ್ ಎಂಬ ಛಾಯಾಗ್ರಾಹಕನ ಪಾತ್ರವನ್ನ ಸುಧೀರ್ ವರ್ಮಾ ನಿರ್ವಹಿಸಿದ್ದಾರೆ. ಈ ಚಿತ್ರದ ಮೂಲಕ ಅವರು ಟಾಲಿವುಡ್ಗೆ ಪ್ರವೇಶಿಸಿದರು. ನಂತ್ರ ಸುಧೀರ್ ವರ್ಮಾ ವರಮುಲಪುಡಿ ನಿರ್ದೇಶನದ ಕುಂದನಪು ಬೊಮ್ಮ ಚಿತ್ರದಲ್ಲಿ ನಾಯಕನಾಗಿ ನಟಿಸಿದರು. ಈ ಚಿತ್ರವು 2016ರಲ್ಲಿ ಬಿಡುಗಡೆಯಾಯಿತು. ಇದಲ್ಲದೇ, ಸುಧೀರ್ ವರ್ಮಾ ಇತರ ಕೆಲವು ತೆಲುಗು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನ ನಿರ್ವಹಿಸಿದ್ದಾರೆ. ಇನ್ನು ಚಿರಂಜೀವಿ ಅವರ ಮಗಳು ಸುಶ್ಮಿತಾ ನಿರ್ಮಿಸಿದ ಶೂಟೌಟ್ ಅಟ್ ಆಲರ್ ವೆಬ್ ಸರಣಿಯಲ್ಲಿ ಸುಧೀರ್ ವರ್ಮಾ ನಟಿಸಿದ್ದಾರೆ.

error: Content is protected !!
Scroll to Top