(ನ್ಯೂಸ್ ಕಡಬ) newskadaba.com ಕಾಸರಗೋಡು, ಜ.13. ಟ್ರಾಕ್ಟರೊಂದು ಮಗುಚಿ ಬಿದ್ದ ಪರಿಣಾಮ ಚಾಲಕನೋರ್ವ ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ವರದಿಯಾಗಿದೆ.
ಮೃತಪಟ್ಟ ಚಾಲಕನನ್ನು ನೇಪಾಳದ ರುನ್ಕಾವ್ ನಿವಾಸಿ ಸುರೇಶ್ ಪೊನ್ ಎಂದು ಗುರುತಿಸಲಾಗಿದೆ.
ಕಾಸರಗೋಡಿನ ಪೈವಳಿಕೆ- ಚೇವಾರ್ ರಸ್ತೆಯಲ್ಲಿರುವ ಕಟ್ಟದಮನೆ ಸೇತುವೆ ಬಳಿ ಕಂಪ್ರೆಸರ್ ಟ್ರಾಕ್ಟರ್ ಮಗುಚಿ ಬಿದ್ದಿದ್ದು, ಟ್ರ್ಯಾಕ್ಚರ್ ಮಗುಚಿ ಬಿದ್ದಾಗ ಸುರೇಶ್ ಅವರು ಅದರಡೆಯಲ್ಲಿ ಸಿಲುಕಿದ್ದು. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಕೊನೆಯುಸಿರೆಳೆದಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಈತ ಕೆಲಸಕ್ಕೆ ಸೇರಿದ್ದ ಎನ್ನಲಾಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.