ತರಗತಿಯೊಳಗೆ ಶಿಕ್ಷಕಿಗೆ ಗುಂಡು ಹಾರಿಸಿದ ಬಾಲಕ..! ➤ ಶಿಕ್ಷಕಿಗೆ ಗಂಭೀರ ಗಾಯ



 (ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಜ.07.   6 ವರ್ಷದ ವಿದ್ಯಾರ್ಥಿಯೋರ್ವ ತರಗತಿಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿಯೋರ್ವಳ ಮೇಲೆ ಗುಂಡು ಹಾರಿಸಿರುವ  ಘಟನೆ ಯುಎಸ್ ನ ವರ್ಜೀನಿಯಾದಲ್ಲಿ ವರದಿಯಾಗಿದೆ.





ಕೂಡಲೇ ಘಟನೆಯನ್ನರಿತ ಶಾಲಾ ಸಿಬ್ಬಂದಿಗಳು ಶಿಕ್ಷಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ. ಕೃತ್ಯವೆಸಗಿದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೊಂದು ಆಕಸ್ಮಿಕವಾಗಿ ಗುಂಡು ಹಾರಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಶಿಕ್ಷಕಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ವರ್ಷದ ಮೇನಲ್ಲಿ ಟೆಕ್ಸಾಸ್ ನಲ್ಲಿ 18 ವರ್ಷದ ಬಂದೂಕುಧಾರಿಯೊಬ್ಬ ಇಬ್ಬರು ಶಿಕ್ಷಕರನ್ನು ಸೇರಿ 19 ಮಂದಿಯನ್ನು ಗುಂಡು ಹಾರಿಸಿ ಹತ್ಯೆಮಾಡಿದ್ದಾರೆ. ಕಳೆದ ವರ್ಷ ಅಮೇರಿಕಾದಲ್ಲಿ ಒಟ್ಟು 44 ಸಾವಿರ ಗುಂಡಿನ ದಾಳಿ ಪ್ರಕರಣಗಳು ನಡೆದಿದೆ ಎನ್ನಲಾಗಿದೆ.






error: Content is protected !!
Scroll to Top