ಆರು ಸರಣಿ ಅಪಘಾತ ➤ ಒಂದೇ ಕುಟುಂಬದ ಐವರು ಮೃತ್ಯು..!!

(ನ್ಯೂಸ್ ಕಡಬ) newskadaba.com .   ಚೆನ್ನೈ, ಜ. 03:  ಆರು ವಾಹನಗಳ ಸರಣಿ ಅಪಘಾತದಿಂದ ಒಂದೇ ಕುಟುಂಬದ ಐವರು ಮೃತಪಟ್ಟ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ತಿರುಚ್ಚಿ-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ವರದಿಯಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ. ವಾಹನದ ಆರ್‌ಸಿ ಪರಿಶೀಲನೆ ವೇಳೆ ಕಾರು ಚೆನ್ನೈನಲ್ಲಿ ನೋಂದಣಿ ಮಾಡಿರುವುದು ಬೆಳಕಿಗೆ ಬಂದಿದೆ ಎಂದರು. ಎರಡು ಬಸ್‌ಗಳು, ಎರಡು ಟ್ರಕ್‌ಗಳು ಮತ್ತು ಎರಡು ಕಾರುಗಳ ನಡುವೆ ಸರಣಿ ಢಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಕಡಲೂರಿನ ವೇಪ್ಪೂರಿನ ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಾಯದಿಂದ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿದು ಬಂದಿದೆ.

Also Read  ಕೇಂದ್ರ ಆರೋಗ್ಯ & ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಭೇಟಿಯಾದ ➤ಸಂಸದ ನಳಿನ್ ಕುಮಾರ್ ಕಟೀಲ್

error: Content is protected !!
Scroll to Top