ಟಾಟಾ ಸನ್ಸ್‌ನ ಮಾಜಿ ನಿರ್ದೇಶಕ ಆರ್‌. ಕೃಷ್ಣಕುಮಾರ್ ವಿಧಿವಶ

(ನ್ಯೂಸ್ ಕಡಬ) newskadaba.com ಮುಂಬಯಿ, ಜ. 02. ಟಾಟಾ ಗ್ರೂಪ್ ನಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದ ಹಾಗೂ ರತನ್ ಟಾಟಾ ಅವರಿಗೆ ಆತ್ಮೀಯರಾಗಿದ್ದ ಕೇರಳ ಮೂಲದ ಆರ್. ಕೃಷ್ಣಕುಮಾರ್(84) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಇವರು ಟಾಟಾ ಸಮೂಹದ ಇಂಡಿಯನ್ ಹೋಟೆಲ್ಸ್ ಮುಖ್ಯಸ್ಥ ಸೇರಿದಂತೆ ವಿವಿಧ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. ಕೃಷ್ಣಕುಮಾರ್ ನಿಧನಕ್ಕೆ ರತನ್ ಟಾಟಾ ಸಂತಾಪ ಸೂಚಿಸಿದ್ದು, ನನ್ನ ಸ್ನೇಹಿತ, ಸಹೋದ್ಯೋಗಿಯ ಅಗಲಿಕೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಉದ್ಯಮ ಮತ್ತು ವೈಯಕ್ತಿಕವಾಗಿ ಅವರ ಜೊತೆಗಿನ ಒಡನಾಟವನ್ನು ಸದಾ ಸ್ಮರಿಸುತ್ತೇನೆ. ಅವರು ಟಾಟಾ ಸಮೂಹ ಮತ್ತು ಟಾಟಾ ಟ್ರಸ್ಟ್ ನ ನಿಜವಾದ ದಿಗ್ಗಜರಾಗಿದ್ದು, ನಮಗೆಲ್ಲರಿಗೂ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

Also Read  ಮಂಗಳೂರು: ಬುದ್ಧಿಮಾಂದ್ಯೆಯ ಮೇಲೆ ಅತ್ಯಾಚಾರ ➤ 65 ವರ್ಷದ ವೃದ್ದನ ವಿರುದ್ಧ ಪ್ರಕರಣ ದಾಖಲು

error: Content is protected !!
Scroll to Top