(ನ್ಯೂಸ್ ಕಡಬ) newskadaba.com ನವದೆಹಲಿ, ಜ. 02. ಕೇಂದ್ರ ಸರ್ಕಾರದ ನೋಟು ನಿಷೇಧ ನಿರ್ಧಾರ ಕಾನೂನುಬಾಹಿರವಾಗಿದ್ದು, ನೋಟು ನಿಷೇಧ ಪ್ರಕ್ರಿಯೆಯನ್ನು ಆರಂಭಿಸಬಾರದಿತ್ತು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಹೇಳಿದ್ದಾರೆ.
ನವೆಂಬರ್ 8, 2016 ರ ಕೇಂದ್ರದ ಅಧಿಸೂಚನೆಯನ್ನು ಕಾನೂನುಬಾಹಿರ ಎಂದು ಕರೆದಿರುವ ಅವರು, “ನನ್ನ ಪ್ರಕಾರ ನ. 08 ರ ಅಧಿಸೂಚನೆಯ ಮೂಲಕ ನೋಟು ಅಮಾನ್ಯೀಕರಣದ ಕ್ರಮವು ಕಾನೂನುಬಾಹಿರವಾಗಿದೆ. ಆದರೆ 2016 ರಲ್ಲಿದ್ದ ಸ್ಥಿತಿಯನ್ನು ಈಗ ಪುನಃಸ್ಥಾಪಿಸಲು ಸಾಧ್ಯವಿಲ್ಲ. ನೋಟು ನಿಷೇಧ ಕಾನೂನು ವಿರುದ್ದವಾಗಿ ಚಲಾಯಿಸಿದ ಅಧಿಕಾರ. ಹೀಗಾಗಿ ಅದು ಕಾನೂನು ಬಾಹಿರ. ಅದನ್ನು ಜಾರಿಗೊಳಿಸಿದ ರೀತಿ ಕಾನೂನಿಗೆ ಅನುಸಾರವಾಗಿಲ್ಲ” ಎಂದು ಹೇಳಿದ್ದಾರೆ.