ನಟಿ ತುನಿಷಾ ಆತ್ಮಹತ್ಯೆ ಪ್ರಕರಣ ➤ ನಟ ಶೀಜಾನ್ ಖಾನ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಮುಂಬೈ, ಡಿ. 31. ಹಿಂದಿ ಕಿರುತೆರೆ ನಟಿ, ಮಾಡೆಲ್‌ ತುನಿಷಾ ಶರ್ಮಾ ಆತ್ಮಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹನಟ ಮತ್ತು ಪ್ರಕರಣದ ಪ್ರಮುಖ ಆರೋಪಿ ಆಕೆಯ ಪ್ರಿಯಕರ ಶೀಜಾನ್‌ ಖಾನ್‌ ಗೆ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಡಿ. 24ರಂದು ತುನಿಷಾ ಶರ್ಮಾ ಅವರು ತಮ್ಮ ಧಾರಾವಾಹಿಯೊಂದರ ಶೂಟಿಂಗ್ ಸೆಟ್‌ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ, ಸಹ ನಟ ಶೀಜಾನ್‌ ಮೊಹಮ್ಮದ್‌ ಖಾನ್‌ ನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಆತನನ್ನು ಪಾಲ್ಘರ್‌ ಜಿಲ್ಲೆಯ ವಸಾಯಿ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.

Also Read  ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ- ಮಮತಾ ಬ್ಯಾನರ್ಜಿ

error: Content is protected !!
Scroll to Top