ಮಕ್ಕಳಿಗೆ ಮಧುಮೇಹ ಖಾಯಿಲೆ ➤ ಮಕ್ಕಳನ್ನು ನದಿಗೆಸೆದು ದಂಪತಿ ಆತ್ಮಹತ್ಯೆ

(ನ್ಯೂಸ್  ಕಡಬ) newskadaba.com ಚೆನ್ನೈ, ಡಿ. 30. ಮಧುಮೇಹ ಅಥವಾ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ದಂಪತಿ ತಮ್ಮಿಬ್ಬರು ಅಪ್ರಾಪ್ತ ಮಕ್ಕಳನ್ನು ನದಿಗೆ ದೂಡಿ ತಾವೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.

ಮೃತರನ್ನು ಯುವರಾಜ್ (41), ಅವರ ಪತ್ನಿ ವನ್ವಿಜಿ (38) ಮತ್ತು ಅವರ ಮಕ್ಕಳಾದ ನಿತಿಶಾ (7), ಅಪ್ಸರಾ (4) ಎಂದು ಗುರುತಿಸಲಾಗಿದೆ. ದನ ಮೇಯಿಸುವವರು ನದಿಯಲ್ಲಿ ನಾಲ್ಕು ಶವ ತೇಲುತ್ತಿರುವುದನ್ನು ನೋಡಿ ಆತಂಕಗೊಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ಸ್ಥಳೀಯ ಈಜುಗಾರರ ನೆರವಿನಿಂದ ಪೊಲೀಸರು ನಾಲ್ವರ ಶವವನ್ನು ಹೊರತೆಗೆದಿದ್ದಾರೆ ಎನ್ನಲಾಗಿದೆ.

Also Read  ಐಸಿಯುನಲ್ಲಿದ್ದ ರೋಗಿಯನ್ನೂ ಬಿಡದ ಕಾಮುಕರು.!

error: Content is protected !!
Scroll to Top