ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ ➤ ಇಬ್ಬರು ಮೃತ್ಯು..!

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಡಿ. 30. ಆಕ್ಸಿಜನ್ ಸಿಲಿಂಡರ್ ಒಂದು ಸ್ಫೋಟಗೊಂಡ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಖಾಸಗಿ ಆಸ್ಪತ್ರೆಯ ಹೊರಗೆ ಸಂಭವಿಸಿದೆ.

ಸ್ಫೋಟದ ರಭಸಕ್ಕೆ ಆಸ್ಪತ್ರೆ ಹಾಗೂ ಸಮೀಪದ ಮನೆಗಳ ಗಾಜುಗಳು ಒಡೆದುಹೋಗಿದ್ದು, ಹಾಗೆಯೇ ಎರಡು ದೇಹಗಳು ಸಂಪೂರ್ಣ ಛಿದ್ರವಾಗಿದೆ ಎನ್ನಲಾಗಿದೆ. ಘಟನೆಯಿಂದಾಗಿ ಹಲವಾರು ಆಮ್ಲಜನಕ ಸಿಲಿಂಡರ್ ಗಳನ್ನು ಸಾಗಿಸುವ ಟ್ರಕ್ ಕೂಡ ರಸ್ತೆಯ ಮಧ್ಯದಲ್ಲಿ ನಿಂತಿರುವುದು ಕಂಡುಬಂದಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮುಘಲ್ಸ್ ರಾಯ್ ಶಾಸಕರು ಭೇಟಿ ನೀಡಿದ್ದಾರೆ ಎನ್ನಲಾಗಿದೆ.

Also Read  ರಸ್ತೆ ಬದಿ ಕಸ ಎಸೆದಿದ್ದಕ್ಕೆ ಬೈದ ವೃದ್ಧ ವ್ಯಕ್ತಿಯ ಬರ್ಬರ ಹತ್ಯೆ..!        

 

error: Content is protected !!
Scroll to Top