(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಡಿ.30. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಗುಜರಾತ್ ನ ಗಾಂಧಿನಗರದ ಸೆಕ್ಟರ್ 30 ರಲ್ಲಿರುವ ಹಿಂದೂ ಸ್ಮಶಾನದಲ್ಲಿ ತಾಯಿ ಹೀರಾಬೆನ್ ಅವರ ಅಂತ್ಯಕ್ರಿಯೆಯನ್ನು ಸಂಪೂರ್ಣ ವಿಧಿವಿಧಾನಗಳ ಪ್ರಕಾರ ನೆರವೇರಿಸಿದರು.
ಪ್ರಧಾನಿ ಮೋದಿ ಹಾಗೂ ಅವರ ಕುಟುಂಬಸ್ಥರು ಮಾತ್ರವಲ್ಲದೆ, ಗುಜರಾತ್ ಮುಖ್ಯಮಂತ್ರಿ ಭೊಪೇಂದ್ರ ಪಟೇಲ್ ಕೂಡ ಗಾಂಧಿನಗರದಲ್ಲಿರುವ ಸ್ಮಶಾನದಲ್ಲಿ ಹೀರಾಬೆನ್ ಮೋದಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಪ್ರಾಧಾನಿಯವರು ಪಶ್ಚಿಮ ಬಂಗಾಳದದಲ್ಲಿ ಇಂದು 7,800 ಕೋಟಿ ರಾಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಬೇಕಾಗಿತ್ತು, ಆದರೆ ಪ್ರಧಾನಿಗಳು ತಾಯಿಯ ಅಂತ್ಯಕ್ರಿಯೆ ನೆರವೇರಿಸಿದ ನಂತರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ (ಪಿಎಂಒ) ತಿಳಿಸಿದೆ ಎನ್ನಲಾಗಿದೆ.