ಮನೆಗೆ ಬೆಂಕಿ ➤ ಒಂದೇ ಕುಟುಂಬದ ಐವರು ಸಜೀವ ದಹನ

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಡಿ. 28. ಗುಡಿಸಲಿಗೆ ಬೆಂಕಿ ಬಿದ್ದ ಪರಿಣಾಮ ಒಂದೇ ಕುಟುಂಬದ 5 ಮಂದಿ ಜೀವಂತವಾಗಿ ಸುಟ್ಟು ಭಸ್ಮವಾದ ದುರ್ಘಟನೆ ಮೌ ಜಿಲ್ಲೆಯ ಶಾಹ್ಪುರ್ ಗ್ರಾಮದಿಂದ ವರದಿಯಾಗಿದೆ.

ಶಾಹ್ಪುರ್ ಗ್ರಾಮದ ಗದ್ದಿದೇವಿ ಮತ್ತು ಅವರ ಮೂವರು ಮಕ್ಕಳು ಹಾಗೂ ಮತ್ತೋರ್ವ ವ್ಯಕ್ತಿ ಸೇರಿ ಒಟ್ಟು 5 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮನೆಯ ಸ್ಟವ್ ನಿಂದ ಬೆಂಕಿ ಹೊತ್ತುಕೊಂಡು ಇಡೀ ಗುಡಿಸಲಿಗೆ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ್ದವರು ಹೊರಗೆ ಬರಲಾಗದೇ ಜೀವಂತ ದಹನವಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Also Read  ಮಾರಕಾಸ್ತ್ರದಿಂದ ಮಗನನ್ನೇ ಕೊಚ್ಚಿ ಕೊಂದ ಪಾಪಿ ತಂದೆ

 

error: Content is protected !!
Scroll to Top