ಮೂಗಿಗೆ ಹಾಕುವ ಕೊರೋನಾ ಲಸಿಕೆಗೆ ದರ ನಿಗದಿ ➤ ಖಾಸಗಿ ಆಸ್ಪತ್ರೆಯಲ್ಲಿ ರೂ. 800 ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ರೂ.325

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 27. ಭಾರತ್ ಬಯೋಟೆಕ್‌ನ ಮೂಗಿನ ಲಸಿಕೆ ಖಾಸಗಿ ಆಸ್ಪತ್ರೆಗಳಲ್ಲಿ 800 ರೂ.ಗೆ ಲಭ್ಯವಾಗಲಿದೆ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ 325 ರೂ. ನಿಗದಿ ಮಾಡಲಾಗಿದೆ.

ಈ ಕೊರೊನಾ ಲಸಿಕೆಯ ವಿಶೇಷವೆಂದರೆ ಅದನ್ನು ಮೂಗಿನ ಮೂಲಕ ನೀಡಬೇಕಾಗುತ್ತದೆ. ಮೂಗಿನ ಲಸಿಕೆಯನ್ನು ನೀಡುವ ಕೆಲಸವನ್ನು ಜನವರಿ ನಾಲ್ಕನೇ ವಾರದಲ್ಲಿ ಪ್ರಾರಂಭಿಸಬಹುದು ಎನ್ನಲಾಗಿದೆ. ಇನ್ನು ಕೇಂದ್ರ ಸರ್ಕಾರವು ಇತ್ತೀಚೆಗೆ ಮೂಗಿನ ಲಸಿಕೆಯನ್ನು ಅನುಮೋದಿಸಿದ್ದು, ಈ ಲಸಿಕೆಯ ಹೆಸರು iNCOVACC. ಈ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ನೀಡಲಾಗುತ್ತದೆ. ಹಾಗೂ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ಲಸಿಕೆ ನೀಡಬಹುದು ಎಂದು ತಿಳಿದು ಬಂದಿದೆ.

Also Read  ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಪಲ್ಟಿ ➤ ಏಳು ಜನರ ದುರ್ಮರಣ

error: Content is protected !!
Scroll to Top