ಮಗಳ ವೀಡಿಯೋ ಪೋಸ್ಟ್ ಮಾಡಿದ ಯುವಕ ➤ ಪ್ರಶ್ನಿಸಿದ ತಂದೆಯನ್ನೇ ಥಳಿಸಿ ಹತ್ಯೆ

(ನ್ಯೂಸ್ ಕಡಬ) newskadaba.com ಗುಜರಾತ್, ಡಿ. 27. ಯುವಕನೋರ್ವ ಮಗಳ ಆಕ್ಷೇಪಾರ್ಹ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದನ್ನು ಪ್ರಶ್ನಿಸಿದಕ್ಕೆ ಬಿಎಸ್ ಎಫ್ ಯೋಧನೋರ್ವನ್ನು ಹತ್ಯೆ ಮಾಡಿರುವ ಘಟನೆ ಗುಜರಾತ್ ನಲ್ಲಿ ವರದಿಯಾಗಿದೆ.

 

ನದಿಯಾಡ್‌ನ ಚಕ್ಲಾಸಿ ಗ್ರಾಮದಲ್ಲಿ ಬಿಎಸ್‌ಎಫ್‌ ಯೋಧರೊಬ್ಬರ ಅಪ್ರಾಪ್ತ ಮಗಳ ಆಕ್ಷೇಪಾರ್ಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದನ್ನು ಗಮನಿಸಿದ ಯೋಧ ಬಾಲಕನ‌ ಮನೆಗೆ ತೆರಳಿ ಪ್ರಶ್ನಿಸಿದ್ದು, ಈ ವೇಳೆ ಬಾಲಕನ ಕುಟುಂಬಸ್ಥರು ಕೊಡಲಿ ಹಾಗೂ ದೊಣ್ಣೆಗಳಿಂದ ಯೋಧ ಮತ್ತು ಅವರ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯೋಧ ಮೃತಪಟ್ಟಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮದುವೆಯಾಗುವ ಗಂಡು ಮತ್ತು ಹೆಣ್ಣಿನ ಜಾತಕ ನೋಡುವುದರ ಹಿಂದೆ ಒಂದು ಬಲವಾದ ಕಾರಣ ಇದೆ

 

error: Content is protected !!
Scroll to Top