ಕಾರು ಅಪಘಾತ ➤ ಮಗು ಮೃತ್ಯು, ಆರು ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com  ಹನೂರು , ಡಿ 23 :  ಕಾರೊಂದು ಭೀಕರವಾಗಿ ಅಪಘಾತಕೊಂಡ ಪರಿಣಾಮ ಮಗುವೊಂದು ಮೃತಪಟ್ಟಿದೆ ಮತ್ತು ಅದೇ ಕುಟುಂಬದ ಆರು ಮಂದಿ ಗಾಯಗೊಂಡ ಕರುಣಾಜನಕ ಘಟನೆ ಹನೂರು ತಾಲೂಕಿನ ಮಂಗಲ ಸಮೀಪದ ಹುಲುಸುಗುಡ್ಡೆ ಬಳಿ ಸಂಭವಿಸಿದೆ.

ಮೃತಪಟ್ಟ ಮಗುವನ್ನು ಮೈಸೂರು ತಾಲೂಕಿನ ಮಾರ್ಬಳ್ಳಿ ಗ್ರಾಮದ ತನ್ಮಯ್ (3) ಹಾಗೂ ಗಾಯಗೊಂಡವರನ್ನು ಮಂಜುಳ, ಸಾಕಮ್ಮ , ಕಿರಣ್, ಚಂದನ್, ಸಣ್ಣ ತಾಯಮ್ಮ ಎಂದು ಗುರುತಿಸಲಾಗಿದೆ.ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಲೆ ಮಹದೇಶ್ಚರ ಬೆಟ್ಟಕ್ಕೆ ತೆರಳಿ ಸ್ಚಗ್ರಾಮಕ್ಕೆ ಹಿಂತಿರುಗುತ್ತಿದ್ದ ಉಲುಸುಗುಡ್ಡೆ ಸಮೀಪ ಕಾರು ಚಾಲಕನ ನಿಯಂತ್ರಣ ತಪ್ಪಿ ಬಲಭಾಗದ ರಸ್ತೆಯಿಂದ ಎಡಭಾಗಕ್ಕೆ ಚಲಿಸಿ ಎಡಭಾಗಕ್ಕೆ ಚಲಿಸಿ ಮರವೊಂದಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

Scroll to Top