ಪೆನ್ಸಿಲ್ ಸಿಪ್ಪೆ ಗಂಟಲಲ್ಲಿ ಸಿಲುಕಿ ಬಾಲಕಿ ಮೃತ್ಯು..!

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಡಿ. 22. ಬಾಲಕಿಯೊಬ್ಬಳು ಬಾಯಿಯಲ್ಲಿ ಪೆನ್ಸಿಲ್ ಇಟ್ಟು ಸಿಪ್ಪೆ ತೆಗೆಯುವಾಗ ಗಂಟಲಿನಲ್ಲಿ ಸಿಪ್ಪೆ ಅಂಟಿಕೊಂಡು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಹಮೀರ್ ಪುರದಲ್ಲಿ ಸಂಭವಿಸಿದೆ.

ಈಕೆ ಮನೆಯ ಟೆರೇಸ್ ಮೇಲೆ ತನ್ನ ಸಹೋದರನೊಂದಿಗೆ ಓದುತ್ತಿದ್ದ ಸಮಯ ಪೆನ್ಸಿಲ್ ಸಿಪ್ಪೆ ತೆಗೆಯಲು ಬಾಯಿಯಲ್ಲಿ ಕಟ್ಟರ್ ಇಟ್ಟುಕೊಂಡು ಸಿಪ್ಪೆ ಸುಲಿಯುತ್ತಿದ್ದಳು. ಈ ಸಂದರ್ಭ ದುರಾದೃಷ್ಟವಶಾತ್ ಸಿಪ್ಪೆಯು ಬಾಲಕಿಯ ಗಂಟಲಿನಲ್ಲಿ ಸಿಕ್ಕಿಕೊಂಡು ಉಸಿರುಗಟ್ಟಿಸಲಾರಂಭಿಸಿದೆ. ತಕ್ಷಣವೇ ಮನೆಯವರು ನೋಡಿ, ಆಸ್ಪತ್ರೆಗೆ ಕರೆದೊಯ್ದವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

Also Read  ರಾಜ್ಯದ 1,695 ಅನಧಿಕೃತ ಶಾಲೆಗಳನ್ನು ಬಂದ್ ಮಾಡಲಾಗುವುದು - ಶಿಕ್ಷಣ ಸಚಿವ ಮಧು ಬಂಗಾರಪ್ಪ

error: Content is protected !!
Scroll to Top