➤ ಲಂಡನ್ ಕೇರಳ ಮೂಲದ ನರ್ಸ್ ಮತ್ತು ಇಬ್ಬರು ಮಕ್ಕಳ ನಿಗೂಢ ಸಾವು!

(ನ್ಯೂಸ್ ಕಡಬ) newskadaba.com, ಲಂಡನ್ ಡಿ. 17  ಉದ್ಯೋಗ ನಿಮಿತ್ತ ಲಂಡನ್ ಗೆ ತೆರಳಿದ್ದ ಕೇರಳ ಮೂಲದ ನರ್ಸ್ ಮತ್ತು ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ಪೂರ್ವ ಇಂಗ್ಲೆಂಡ್ ನ ನಾರ್ಥಾಂಪ್ಪನ್ ಪ್ರದೇಶದಲ್ಲಿ ನಡೆದಿದೆ.

ಭಾರತೀಯ ಮೂಲದ ಮಹಿಳೆ ಮತ್ತು ಅವರ ಇಬ್ಬರು ಮಕ್ಕಳು ಮನೆಯಲ್ಲಿ ಗಂಭೀರವಾದ ಗಾಯಗಳೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ. ಕೇರಳದ ಕೊಟ್ಟಾಯಂನ 40 ವರ್ಷದ  ನರ್ಸ್,  ಆರು ವರ್ಷದ ಮಗ, ಹಾಗೂ ನಾಲ್ಕು ವರ್ಷದ ಮಗಳು ಕೊಲೆಗಿಡಾದವರು ಎಂದು ಗುರುತಿಸಲಾಗಿದೆ. ಈ ಘಟನೆ ಕುರಿತು ಲಂಡನ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

Scroll to Top