ತಂದೆ ಎದುರೇ ಮಗಳನ್ನು ಕಿಡ್ನಾಪ್ ಮಾಡಿದ ನಾಲ್ವರ ಗ್ಯಾಂಗ್…!

(ನ್ಯೂಸ್ ಕಡಬ) newskadaba.com ತೆಲಂಗಾಣ , ಡಿ 20 :  18 ವರ್ಷದ ಯುವತಿಯನ್ನು ಆಕೆಯ ತಂದೆಯ ಮುಂದೆಯೇ ಕಿಡ್ನಾಪ್ ಮಾಡಿರುವ ಆಘಾತಕಾರಿ ಘಟನೆ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಸಂಭವಿಸಿದೆ.

ಬೆಳಗ್ಗೆ ತಂದೆಯೊಂದಿಗೆ ದೇವಸ್ಥಾನಕ್ಕೆ ತೆರಳಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಯುವತಿಯನ್ನು ಅಪಹರಿಸಲಾಗಿದೆ . ಕಾರಿನಲ್ಲಿ ಬಂದ ನಾಲ್ವರು ಯುವಕರು ಯುವತಿಯನ್ನು ಬಲವಂತವಾಗಿ ಹತ್ತಿಸಿಕೊಂಡು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ವೇಮುಲವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Also Read  ಅಂಗಡಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಕದ್ದ ಪೊಲೀಸ್​ ಅಧಿಕಾರಿ.! ➤ಅಧಿಕಾರಿ ಶಾಶ್ವತವಾಗಿ ಕೆಲಸದಿಂದ ವಜಾ..!

error: Content is protected !!
Scroll to Top