(ನ್ಯೂಸ್ ಕಡಬ) newskadaba.com ಕೊಲ್ಕತ್ತ , ಡಿ 20 : ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ವಿವಾಹವನ್ನು ಆಕೆಯ ಕ್ಲಾಸ್ ಮೇಟ್ ನಿಲ್ಲಿಸಿರುವ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ನಡೆದಿದೆ.
ತನ್ನ ಕ್ಲಾಸ್ ಮೇಟ್ ಶಾಲೆಗೆ ಗೈರು ಹಾಜರಗಿರಿವುದನ್ನು ಗಮನಿಸಿದ ಗೊಲಾರ್ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿ ಶುಹಿಲಾ, ನಂತರ ಆಕೆಗೆ ಮದುವೆ ನಿಗದಿಯಾಗಿರುವುದು ಗೊತ್ತಾಗಿದೆ. ಆಕೆಯ ಬಾಲಕಿಯ ಮನೆಗೆ ತೆರಳಿ ಶಾಲೆಗೆ ಕಳಿಸುವಂತೆ ಒತ್ತಾಯಿಸಿದ್ದಾಳೆ . ಆಗ ಬಾಲಕಿಯನ್ನು ಮನೆಯವರು ಹಿಂಬಾಗಿಲಿನಿಂದ ವರನ ಮನೆಗೆ ಕಳಿಸಿದ್ದಾರೆ. ಇದನ್ನು ತಿಳಿದ ಸ್ನೇಹಿತೆ ವರನ ಮನೆಗೆ ಹೋಗಿ ಪ್ರತಿಭಟನೆ ನಡೆಸಿದ್ದಾಳೆ. ಇದರಿಂದ ಸಮಸ್ಯೆಯಾಗುವುದು ಎಂದು ಅರಿತು ವರನ ಮನೆಯವರು ಅಕೆಯನ್ನು ಸ್ನೇಹಿತೆಯ ಕೈಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ.