(ನ್ಯೂಸ್ ಕಡಬ) newskadaba.com ಹೊಸದಿಲ್ಲಿ , ಡಿ 20 : ರಾಷ್ಟ್ರ ರಾಜಧಾನಿ ಮತ್ತು ಉತ್ತರ ಭಾರತದಲ್ಲಿ ಈ ಋತುವಿನನಲ್ಲಿ ಮೊದಲ ಬಾರಿಗೆ ಮುಂಜಾನೆ ದಟ್ಟ ಮಂಜು ಆವರಿಸಿದ್ದು, ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಕೇವಲ 150 ಮೀಟರ್ ಗಿಂತ ದೂರದ ವಸ್ತುಗಳು ಕೂಡಾ ಕಾಣಿಸದಷ್ಟು ದಟ್ಟವಾಗಿ ಮಂಜು ಕವಿದಿತ್ತು.
ಉತ್ತರ ರಾಜ್ಯ ಗಳಲ್ಲಿ ದಟ್ಟ ಮಂಜಿನಿಂದಾಗಿ ಸಂಭವಿಸಿದ ಅಪಘಾತಗಳು ಮತ್ತು ವಾಹನಗಳ ದಟ್ಟಣೆಯಿಂದಾಗಿ ಕನಿಷ್ಕ 11 ಮಂದಿ ಮೃತಪಟ್ಟಿದ್ದಾರೆ. ಹಾಗೂ ಉತ್ತರ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ, ಪಂಜಾಬ್ ನಲ್ಲಿ ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಉತ್ತರ ಪ್ರದೇಶದ ಅಲೀಗಢ ಜಿಲ್ಲೆಯಲ್ಲಿ 18 ವಾಹನಗಳು ಢಿಕ್ಕಿ ಹೊಡೆದು ಅಪಘಾತಕ್ಕೀಡಾಗಿವೆ. ಮೂರು ಮಂದಿ ಮೃತಪಟ್ಟಿದ್ದಾರೆ. ಹಾಗೂ ಹಾಪುರ-ಲಕ್ನೋ ಹೆದ್ದಾರಿಯಲ್ಲಿ ವ್ಯಾನ್ ,ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಒಬ್ಬ ಮೃತಪಟ್ಟಿದ್ದಾರೆ ಎಂದು ತಿಳಿದಿ ಬಂದಿದೆ.