20 ತಿಂಗಳು ಜೈಲಲ್ಲಿ ಕಳೆದ ಅಮಾಯಕ ಯುವಕ   ➤ಯುವತಿ ಪ್ರತ್ಯಕ್ಷ…!!!  

(ನ್ಯೂಸ್ ಕಡಬ) newskadaba.com  ಡೆಹ್ರಾಡೂನ್, ಡಿ.19  ಅಪ್ರಾಪ್ತ ವಯಸ್ಸಿನ ಯುವತಿಯನ್ನು ಅಪಹರಿಸಿದ ಆರೋಪದಲ್ಲಿ 20 ತಿಂಗಳ ಜೈಲು ವಾಸ ಅನುಭವಿಸಿದ 19 ವರ್ಷದ ಯುವಕನೊಬ್ಬ ಇದೀಗ ಯುವತಿ ಪತ್ತೆಯಾದ ಹಿನ್ನೆಲೆಯಲ್ಲಿ ಜೈಲಿನಿಂದ ಹೊರಬಂದಿದ್ದಾನೆ ಎಂದು ತಿಳಿದುಬಂದಿದೆ.

ಯುವಕನ ಮೇಲೆ ಮಾಡಿರುವ ಆರೋಪಗಳು ಸುಳ್ಳು ಹಾಗೂ ಯುವಕ ಅಮಾಯಕ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ತನ್ನ ಪೋಷಕರ ಬಳಿ ಮರಳಿದ ಯುವತಿ, ತಾನು ಯಾರಿಗೂ ಮಾಹಿತಿ ನೀಡದೆ ಚಂಡೀಗಢಕ್ಕೆ ತೆರಳಿದ್ದಾಗಿ ಹೇಳಿಕೆ ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ, ಆರೋಪಿ ಯುವಕನನ್ನು ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ. ಈ ಭಯಾನಕ ಅನುಭವ ತನಗೆ ಭೀತಿ ಹಾಗೂ ಅಘಾತ ತಂದಿದೆ ಎಂದು ಜೈಲಿನಿಂದ ಬಿಡುಗಡೆಯಾದ ಯುವಕ ಹೇಳಿದ್ದಾನೆ ಎನ್ನಲಾಗಿದೆ.

Also Read  ಬೆಳ್ತಂಗಡಿ: ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ➤ ಸವಾರ ಸ್ಥಳದಲ್ಲೇ ಮೃತ್ಯು

 

 

error: Content is protected !!
Scroll to Top