ಹೊಸದಿಲ್ಲಿ : ನಿಯಂತ್ರಣ ತಪ್ಪಿದ ಕಾರು ; ಮೂವರು ಮಕ್ಕಳಿಗೆ ಢಿಕ್ಕಿ

(ನ್ಯೂಸ್ ಕಡಬ) newskadaba.com  ಹೊಸದಿಲ್ಲಿ , ಡಿ 19 :  ನಿಯಂತ್ರಣ  ತಪ್ಪಿದ  ಮಾರುತಿ ಬ್ರೆಝಾ ಕಾರೊಂದು ಫುಟ್ ಪಾತಿನಲ್ಲಿದ್ದ  ಮೂರು ಮಕ್ಕಳಿಗೆ ಢಿಕ್ಕಿ ಹೊಡೆದ ಘಟನೆ ಉತ್ತರ ದಿಲ್ಲಿಯ ಗುಲಾಬಿ ಬಾಗ್ ನ ಲೀಲಾವತಿ ಶಾಲೆಯ ಬಳಿ ವರದಿಯಾಗಿದೆ.

ಈ ದ್ಯಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಕ್ಕಳಿಗೆ ಢಿಕ್ಕಿ ಹೊಡೆದ ಬಳಿಕ ಕಾರು ಕೆಲ ದೂರ ಚಲಿಸಿ ನಿಲ್ಲುವುದು ಕ್ಯಾಮರದಲ್ಲಿ ಸೆರೆಯಾಗಿದೆ. ಕಾರಿನ ಟೈರ್ ಏಕಾಏಕಿ  ಒಡೆದಿದ್ದರಿಂದ ತನ್ನ ನಿಯಂತ್ರಣ ತಪ್ಪಿದೆ ಎಂದು ಚಾಲಕ ಹೇಳಿದ್ದಾನೆ. ಈ ಘಟನೆಯಿಂದ 10 ಮತ್ತು 4 ವರ್ಷದ ಇಬ್ಬರು ಮಕ್ಕಳಿಗೆ ಗಾಯವಾಗಿದೆ. ಇನ್ನೊಂದು 6 ವರ್ಷದ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಂದು ತಿಳಿದು ಬಂದಿದೆ.

Also Read  ಹಜ್ ಯಾತ್ರೆಗೆ ಮುಂಗಡ ಪಾವತಿ ಅವಧಿ ಅ.31ರ ತನಕ ವಿಸ್ತರಣೆ

error: Content is protected !!
Scroll to Top