ಶೀಘ್ರದಲ್ಲಿ ಭಾರತಕ್ಕೆ ಬರಲಿದೆ 5G ತಂತ್ರಜ್ಞಾನ..!!!

(ನ್ಯೂಸ್ ಕಡಬ) newskadaba.com ತಂತ್ರಜ್ಞಾನ, ನ.23. 2ಜಿ, 3ಜಿ, 4ಜಿ ಆಯ್ತು ಈಗ 5ಜಿ ಯುಗ. ಜಾಗತಿಕ ರಂಗದಲ್ಲಿ ಹೊಸ ಕ್ರಾಂತಿಗೆ 5ಜಿ ದೂರಸಂಪರ್ಕ ಸೇವೆ ಮುನ್ನುಡಿ ಬರೆಯಲಿದೆ. ವಿಶ್ವದಲ್ಲೇ ಅತಿ ವೇಗದ ಮೊಬೈಲ್ ಮತ್ತು ವೈರ್ ಲೆಸ್ ಇಂಟರ್‌ನೆಟ್ ಸೇವೆ ಒದಗಿಸುತ್ತಿರುವ ದಕ್ಷಿಣ ಕೊರಿಯಾದಲ್ಲಿ ಈಗಾಗಲೇ 5ಜಿ ದೂರ ಸಂಪರ್ಕ ಪರೀಕ್ಷಾ ಸಿಗ್ನಲ್‌ಗಳನ್ನು ನೀಡಲಾಗಿದೆ.

5ಜಿ ತಂತ್ರಜ್ಞಾನದಡಿ ಎರಡು ಜಿಬಿಯ ಸಿನಿಮಾ ಡೌನ್‌ಲೋಡ್ ಮಾಡಲು ಬರೀ ಒಂದೇ ಸೆಕೆಂಡ್ ಸಾಕು. 4G ತಂತ್ರಜ್ಞಾನದಲ್ಲಿ ಲಭ್ಯವಾಗುವ ವಿವಿಧ ವೇಗದ ಸೇವೆಗಳಿಂದ ಭಾರತೀಯರು ಸಂತುಷ್ಟರಾಗಿರುವ ಹೊತ್ತಿನಲ್ಲೇ, ಎರಿಕ್ಸ್‌ಸನ್ ಕಂಪನಿ ಭಾರತದಲ್ಲಿ 5G ತಂತ್ರಜ್ಞಾನವನ್ನು ನೇರ ಪ್ರದರ್ಶನದ ಮೂಲಕ ಅನಾವರಣಗೊಳಿಸಿದೆ. ಕಳೆದ ಶುಕ್ರವಾರ ಸ್ವೀಡನ್ ಮೂಲದ ಎರಿಕ್ಸ್’ಸನ್ ಕಂಪನಿ 5G ತಂತ್ರಜ್ಞಾನವನ್ನು ಅನಾವರಣಗೊಳಿಸಿದೆ. ಈ ವೇಳೆ ಪ್ರತಿ ಸೆಕೆಂಡ್‌ಗೆ 5.75 ಗಿಗಾ ಬೈಟ್ಸ್ ವೇಗದಲ್ಲಿ ದತ್ತಾಂಶ ವರ್ಗಾವಣೆಯಾಗಿದೆ.

Also Read  ಮನೆಗೆ ಹಾಗೂ ಮನೆಯ ಸದಸ್ಯರಿಗೆ ಆಗಿರುವ ದೃಷ್ಟಿ ದೋಷವನ್ನು ಈ ರೀತಿಯಾಗಿ ಸುಲಭವಾಗಿ ನಿವಾರಣೆ ಮಾಡಬಹುದು

ಅಂದರೆ 5GBಯ ಚಲನಚಿತ್ರವೊಂದನ್ನು ಕೇವಲ 1 ಸೆಕೆಂಡ್‌ನಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ. ಅಂದರೆ 4G ಎಲ್‌ಟಿಇ ವ್ಯವಸ್ಥೆಗಿಂತ 100 ಪಟ್ಟು ಹೆಚ್ಚಿನ ವೇಗ 5G ತಂತ್ರಜ್ಞಾನದಲ್ಲಿ ಸಾಧ್ಯವಾಗಲಿದೆ. ಹಾಲಿ ಇರುವ 2G, 3G ಮತ್ತು 4G ವ್ಯವಸ್ಥೆಯಲ್ಲಿ 5G ತಂತ್ರಜ್ಞಾನ ನೀಡುವುದು ಸಾಧ್ಯವಿಲ್ಲ. ಹೀಗಾಗಿ ಹಾಲಿ ಇರುವ ತಂತ್ರಜ್ಞಾನವನ್ನೇ ಸಣ್ಣ ಬದಲಾವಣೆಯೊಂದಿಗೆ ಹೇಗೆ ಹೊಸ ವ್ಯವಸ್ಥೆಗೆ ಹೇಗೆ ಮಾರ್ಪಾಡು ಮಾಡಬಹುದು ಎಂಬುದರ ಬಗ್ಗೆ ಸಂಶೋಧನೆ ನಡೆಸುತ್ತಿರುವುದಾಗಿ ಎರಿಕ್ಸ್‌ಸನ್ ಹೇಳಿದೆ.

ಎರಿಕ್ಸ್‌ಸನ್ ಕಂಪನಿ ಭಾರತದಲ್ಲಿ ಏರ್‌ಟೆಲ್ ಜೊತೆಗೆ 5G ಸೇವೆ ನೀಡುವ ಒಪ್ಪಂದ ಮಾಡಿಕೊಂಡಿದೆ.

error: Content is protected !!
Scroll to Top