ಮರಕ್ಕೆ ಢಿಕ್ಕಿ ಹೊಡೆದ ಆಟೋ ➤ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ತುಮಕೂರು , ಡಿ .12. ನಗರದ ಶೆಟ್ಟಿಹಳ್ಳಿ ರಾಘವೇಂದ್ರ ಸ್ವಾಮಿಮಠದ ಬಳಿ ಇರುವ ಗೋದಾವರಿ ಮೆಸ್ ಬಳಿ ಕಾರಿಗೆ ಢಿಕ್ಕಿ ಹೊಡೆಯುವುದನ್ನುತಪ್ಪಿಸಲು ಹೋಗಿ ಆಟೋ ಒಂದು ಮರಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಕೆ ಪಾಲಸಂದ್ರ ವಾಸಿ ನಂಜುಂಡಪ್ಪ (60) ಎಂದು ಗುರುತಿಸಲಾಗಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ನರೇಂದ್ರ ಬಾಬು (37) , ಆಟೋ ಚಾಲಕ ಶೆಟ್ಟಳಪ್ಪ (47) ಹಾಗೂ ಮೃತರ ಪತ್ನಿಗಂಗಾಣಮ್ಮ ಇವರಿಗೆ ಗಾಯಗಳಾಗಿವೆ. ಈ ಬಗ್ಗೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top