KGF- 2 ಖ್ಯಾತಿಯ ತಾತ ಕೃಷ್ಣ ಜಿ ರಾವ್ ನಿಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 07. ಕೆಜಿಎಫ್ ಸಿನಿಮಾದಲ್ಲಿ (KGF 2) ಕುರುಡ ಮುದುಕನ ಪಾತ್ರ ನಿಭಾಯಿಸಿದ್ದ ಹಿರಿಯ ನಟ ಕೃಷ್ಣ.ಜಿ.ರಾವ್ ನಿಧನರಾಗಿದ್ದಾರೆ.

 

ಡಿಸೆಂಬರ್ 1ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೇ ಬುಧವಾರದಂದು ಮೃತಪಟ್ಟಿದ್ದಾರೆ. ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಕೃಷ್ಣ ಜಿ ರಾವ್ ಅವರ ಆರೋಗ್ಯ ಸ್ಥಿತಿಯು ತುಂಬ ಗಂಭೀರವಾಗಿದ್ದ ಹಿನ್ನೆಲೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಿದರೂ ಚಿಂತಾಜನಕ ಸ್ಥಿತಿಗೆ ತಲುಪಿದ್ದ ಇವರು ನಿಧನರಾಗಿದ್ದಾರೆ.

Scroll to Top