ಚಳಿಗಾಲದಲ್ಲಿ ತಪ್ಪದೇ ಪ್ರತಿದಿನ ಒಂದು ಬಾಳೆಹಣ್ಣು ತಿನ್ನಿ

(ನ್ಯೂಸ್ ಕಡಬ) newskadaba.com ನ.15: ಚಳಿಗಾಲದಲ್ಲಿ ನಿಯಮಿತವಾಗಿ ಬಾಳೆಹಣ್ಣು ಸೇವನೆ ಮಾಡುವುದರಿಂದ ವಿಶೇಷ ಪ್ರಯೋಜನಗಳಿವೆ. ಸ್ನಾಯುಗಳನ್ನು ಬಲಪಡಿಸುವ ಜೊತೆಗೆ ಚರ್ಮಕ್ಕೂ ಇದರಿಂದ ಸಾಕಷ್ಟು ಲಾಭಗಳಿವೆ. ಚಳಿಗಾಲದಲ್ಲಿ ಚರ್ಮವು ಒಣಗುತ್ತದೆ. ಮುಖದಲ್ಲಿ ಹೊಳಪಿರುವುದಿಲ್ಲ. ಪ್ರತಿದಿನ ಬಾಳೆಹಣ್ಣು ತಿನ್ನಲು ಪ್ರಾರಂಭಿಸಿದರೆ ಮುಖದ ಗ್ಲೋ ಹೆಚ್ಚುತ್ತದೆ. ಅಷ್ಟೇ ಅಲ್ಲ ಬಾಳೆಹಣ್ಣನ್ನು ಪೇಸ್ಟ್‌ ಮಾಡಿಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಬಹುದು. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಇದೆ, ಇದು ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಆದ್ದರಿಂದ ಚಳಿಗಾಲದಲ್ಲಿ ಪ್ರತಿದಿನ ತಪ್ಪದೇ ಒಂದು ಬಾಳೆಹಣ್ಣನ್ನು ತಿನ್ನಬೇಕು. ಇದರಿಂದ ಚರ್ಮದ ಎಲ್ಲಾ ಜೀವಕೋಶಗಳು ಸಾಕಷ್ಟು ಆಮ್ಲಜನಕವನ್ನು ಪಡೆಯುತ್ತವೆ. ತ್ವಚೆಗೆ ಹೊಳಪು ಬರುತ್ತದೆ.

Also Read  ವಿವಾಹ ಅಥವಾ ಶುಭಕಾರ್ಯಗಳ ಸಮಸ್ಯೆಗಳಿಗೆ ಪರಿಹಾರ

ಬಾಳೆಹಣ್ಣು ಕಾಲಜನ್ ಮಟ್ಟವನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಇದೊಂದು ಪ್ರೋಟೀನ್ ಆಗಿದ್ದು, ಚರ್ಮದ ರಚನೆ ಮತ್ತು ಸ್ಥಿತಿಸ್ಥಾಪಕತ್ವವನ್ನು ನಿರ್ವಹಿಸುತ್ತದೆ. ಹಾಗಾಗಿ ಬಾಳೆಹಣ್ಣು ತಿನ್ನುವುದರಿಂದ ಚರ್ಮವು ನೈಸರ್ಗಿಕ ರೀತಿಯಲ್ಲಿ ಮೃದುವಾಗುತ್ತದೆ. ಬಾಳೆಹಣ್ಣಿನಲ್ಲಿ ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಸಿ ಕೂಡ ಇದೆ. ಇದು ಚರ್ಮದ ಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದರಿಂದ ತ್ವಚೆ ಕೂಡ ಆರೋಗ್ಯಕರವಾಗಿರುತ್ತದೆ.
img src=”https://newskadaba.com/wp-content/uploads/2022/10/Elite-Mobiles-239×300.gif” alt=”” width=”239″ height=”300″ class=”alignnone size-medium wp-image-61681″ />

error: Content is protected !!
Scroll to Top