(ನ್ಯೂಸ್ ಕಡಬ) newskadaba.com ಅ.28: ಮಾರುಕಟ್ಟೆಯಲ್ಲಿ E-Textile ಎಂಬ ಹೊಸ ತಂತ್ರಜ್ಞಾನ ಬಂದಿದ್ದು ನಿಮ್ಮ ಬಟ್ಟೆಗಳಿಂದಲೇ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಬಹುದಾಗಿದೆ. ವಿಶೇಷ ಎಂದರೆ, ಕಣ್ಣು ಮಿಟುಕಿಸುವುದರೊಳಗೆ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಫುಲ್ ಆಗುತ್ತೆ. ಇ-ಟೆಕ್ಸ್ಟೈಲ್ ವಾಸ್ತವವಾಗಿ ವಿಶೇಷವಾದ ಬಟ್ಟೆಯಾಗಿದ್ದು ಅದು ಸಾಮಾನ್ಯ ಬಟ್ಟೆಗಳಿಗಿಂತ ತುಂಬಾ ಭಿನ್ನವಾಗಿದೆ. ಈ ಬಟ್ಟೆ ಕೇವಲ ಧರಿಸಲು ಮಾತ್ರವಲ್ಲ ಅದರ ನೈಜ ಬಳಕೆಯ ಬಗ್ಗೆ ತಿಳಿದರೆ ನೀವು ಆಶ್ಚರ್ಯಚಕಿತರಾಗಬಹುದು. ವಾಸ್ತವವಾಗಿ ಈ ಬಟ್ಟೆಯು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಬಲ್ಲದು.
ಈ ಬಟ್ಟೆಯು ಸೌರ ಶಕ್ತಿಯನ್ನು ತನ್ನೊಳಗೆ ಉಳಿಸುತ್ತದೆ ಮತ್ತು ನೀವು ಬಯಸಿದಾಗ ಅದನ್ನು ಬಳಸಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಬಹುದು. ಇದು ದೊಡ್ಡ ಬಟ್ಟೆ ಆಗಿದ್ದು, ಹೆಚ್ಚು ಸೌರ ಶಕ್ತಿಯನ್ನು ಅದು ತನ್ನೊಳಗೆ ಸಂಗ್ರಹಿಸುತ್ತದೆ ಮತ್ತು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವು ಹೆಚ್ಚಾಗಿ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ನಾಟಿಂಗ್ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ವಿಶೇಷ ಬಟ್ಟೆಯನ್ನು ಸಿದ್ಧಪಡಿಸಿದ್ದಾರೆ. ಈಗ ಈ ತಂತ್ರಜ್ಞಾನದ ಕೆಲಸ ನಡೆಯುತ್ತಿದೆ ಆದರೆ ಭವಿಷ್ಯದಲ್ಲಿ ಇದು ಎಲ್ಲರಿಗೂ ಲಭ್ಯವಾಗಬಹುದು ಎಂದು ಹೇಳಲಾಗುತ್ತಿದೆ.