Breaking | ವಾಟ್ಸ್ಅಪ್ ಸೇವೆಯಲ್ಲಿ ವ್ಯತ್ಯಯ ➤‌ ಪರದಾಡಿದ ಕೋಟ್ಯಂತರ ಬಳಕೆದಾರರು

(ನ್ಯೂಸ್ ಕಡಬ) newskadaba.com ನವದೆಹಲಿ, ಅ.25. ವಿಶ್ವದಾದ್ಯಂತ ವಾಟ್ಸ್ಅಪ್ ಸೇವೆಯಲ್ಲಿ ವ್ಯತ್ಯಯವುಂಟಾಗಿದ್ದು, ಕೆಲಕಾಲ ವಾಟ್ಸ್ಅಪ್ ಬಳಕೆದಾರರು ತೊಂದರೆ ಅನುಭವಿಸುವಂತಾಯಿತು.

ಮಧ್ಯಾಹ್ನ 12.07 ರಿಂದ ವಿಶ್ವದ ಕೆಲವು ದೇಶಗಳಲ್ಲಿ ವಾಟ್ಸ್ಅಪ್ ಸೇವೆಯಲ್ಲಿ ವ್ಯತ್ಯಯವುಂಟಾಗಿದ್ದು, ಭಾರತದಲ್ಲೂ 12.27ರ ವೇಳೆಗೆ ಸಮಸ್ಯೆ ತಲೆದೋರಿದೆ. 2021 ಅಕ್ಟೋಬರ್ 05 ರ ನಂತರ ಇದೇ ಮೊದಲ ಬಾರಿಗೆ ವಾಟ್ಸ್ಅಪ್ ಬಳಕೆಯಲ್ಲಿ ವ್ಯತ್ಯಯವುಂಟಾಗಿರುವುದು ಇದೇ ಮೊದಲ ಬಾರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಫೇಸ್‌ಬುಕ್‌ ಒಡೆತನದ ವಾಟ್ಸ್ಅಪ್ ಸಂಸ್ಥೆಯು ಪರಿಣತರು ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವನ್ನು ಮಾಡುತ್ತಿದ್ದು, ಬಳಕೆದಾರರು ಸಹಕರಿಸುವಂತೆ ಕೋರಿದ್ದಾರೆ.

Also Read  ಸರಳ ಮನೆ ಮದ್ದು - 02 ✍? ಅಜಿತ್ ಕೆ. ಕೋಡಿಂಬಾಳ

 

error: Content is protected !!
Scroll to Top