ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ಧರೆ ಕುಸಿತ ➤ ಸುಳ್ಯ- ಪಾಣತ್ತೂರು ಅಂತರಾಜ್ಯ ರಸ್ತೆ ಸಂಪರ್ಕ ಕಡಿತ

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 30. ಭಾರೀ ಮಳೆಗೆ ಧರೆ ಕುಸಿದ ಪರಿಣಾಮ ಸುಳ್ಯ-ಪಾಣತ್ತೂರು ಅಂತರಾಜ್ಯ ಸಂಪರ್ಕ ರಸ್ತೆಯು ಕಡಿತಗೊಂಡಿದೆ.


ಗಡಿ ಪ್ರದೇಶವಾದ ಬಾಟೋಳಿಯಲ್ಲಿ ಕೇರಳ ಭಾಗದ ರಸ್ತೆ ಬದಿಯಲ್ಲಿ ಭಾರೀ ಪ್ರಮಾಣದಲ್ಲಿ ಧರೆ ಕುಸಿದಿದ್ದು, ರಸ್ತೆ ಮುಚ್ಚಿಹೋಗಿದೆ. ಈ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಅರ್ಧದಲ್ಲಿದೆ. ರಸ್ತೆ ಮೇಲೆ ಮಣ್ಣು ಕುಸಿದ ಕಾರಣ ರಸ್ತೆ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಕಂಬಗಳಿಗೂ ಹಾನಿಯಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

Also Read  ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ..!

error: Content is protected !!
Scroll to Top