ಕಡಬ: ಅಂಗಡಿಗಳಿಗೆ ನುಗ್ಗಿ ಕಳ್ಳರ ಕೈಚಳಕ ➤ ಇಲೆಕ್ಟ್ರಾನಿಕ್ ವಸ್ತುಗಳು, ನಗದಿನೊಂದಿಗೆ ಪರಾರಿ..?



(ನ್ಯೂಸ್ ಕಡಬ) newskadaba.com ಕಡಬ, ಜೂ.24. ಕಡಬದಲ್ಲಿ ಕಳ್ಳರು ತಮ್ಮ ಕೈಚಳಕವನ್ನು ಮೆರೆದಿದ್ದು, ಎರಡು ಪ್ರಮುಖ ಅಂಗಡಿಯ ಮೇಲ್ಛಾವಣಿಯ ಮೂಲಕ ಒಳ ನುಗ್ಗಿರುವ ಕಳ್ಳರು ಸಾವಿರಾರು ರೂ. ಮೌಲ್ಯದ ವಸ್ತುಗಳನ್ನು ದೋಚಿರುವ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.







ಕಡಬದ ಮುಖ್ಯ ರಸ್ತೆಯ ಸಂಗೀತಾ ಇಲೆಕ್ಟ್ರಾನಿಕ್ಸ್ ಹಾಗೂ ಸ್ಟಾರ್ ಟ್ರೇಡರ್ಸ್ ನ ಹಿಂಭಾಗದ ಮೇಲ್ಛಾವಣಿಯ ಮೂಲಕ ಒಳ ನುಗ್ಗಿರುವ ಕಳ್ಳರು ನಗದು ಇಲೆಕ್ಟ್ರಾನಿಕ್ ವಸ್ತುಗಳ ಜೊತೆ ಪರಾರಿಯಾಗಿದ್ದಾರೆ. ಸಿಸಿ ಕ್ಯಾಮರಾವನ್ನು ಧ್ವಂಸಗೊಳಿಸಿ ಡಿವಿಆರ್ ನ್ನು ಹೊತ್ತೊಯ್ದಿದ್ದಾರೆ‌. ಈ ಬಗ್ಗೆ ಅಂಗಡಿಯ ಮಾಲಕರು ಕಡಬ ಠಾಣೆಗೆ ದೂರು ನೀಡಿದ್ದಾರೆ.






 

 

error: Content is protected !!
Scroll to Top