ವಿಟ್ಲ: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಕಡಬದಲ್ಲಿ ಪತ್ತೆ



(ನ್ಯೂಸ್ ಕಡಬ) newskadaba.com ವಿಟ್ಲ, ಜೂ. 19. ಕಾಲೇಜಿಗೆಂದು ತೆರಳಿದ ವಿದ್ಯಾರ್ಥಿನಿ ಮನೆಗೆ ಬಾರದೆ ನಾಪತ್ತೆಯಾಗಿದ್ದು, ಇದೀಗ ಕಡಬದಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ.







ಕಾಲೇಜಿಗೆಂದು ತೆರಳಿದ್ದ ವಿದ್ಯಾರ್ಥಿನಿ ಮನೆಗೆ ಬಾರದೆ ಕಾಣೆಯಾಗಿದ್ದಳು. ಈ ಕುರಿತಂತೆ ಆಕೆಯ ಚಿಕ್ಕಮ್ಮ ವಿಟ್ಲ ಠಾಣೆಗೆ ನೀಡಿದ ದೂರಿನನ್ವಯ ವಿಟ್ಲ ಪೋಲೀಸರ ತಂಡವು ವಿದ್ಯಾರ್ಥಿನಿಯನ್ನು ಕಡಬದಲ್ಲಿ ಪತ್ತೆ ಹಚ್ಚಿ ಸುರಕ್ಷಿತವಾಗಿ ಮನೆಯವರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಮೂಲತಃ ಕಡಬ ನಿವಾಸಿಯಾಗಿರುವ ಈಕೆ ವಿದ್ಯಾಭ್ಯಾಸಕ್ಕಾಗಿ ತನ್ನ ಚಿಕ್ಕಮನ ಮನೆಯಲ್ಲಿ ವಾಸವಾಗಿದ್ದು, ಮಾನಸಿಕವಾಗಿ ನೊಂದಿರುವ ಈಕೆ ಎಂದಿನಂತೆ ಕಾಲೇಜಿಗೆ ಹೋಗುವುದೆಂದು ತೆರಳಿ ಕಡಬದ ತನ್ನ ಸಂಬಂಧಿಕರ ಮನೆಗೆ ಹೋಗಿ ತಂಗಿದ್ದಾಳೆ ಎಂಬ ಮಾಹಿತಿ ತಿಳಿದು ಬಂದಿದೆ.






error: Content is protected !!
Scroll to Top