ಟ್ರಾಫಿಕ್ ನಲ್ಲಿ ದಂಡ ವಿಧಿಸಿದರೆಂದು ರಾತ್ರಿಯಿಡೀ ಠಾಣೆಯ ಕರೆಂಟ್ ತೆಗೆದ ಲೈನ್ ಮ್ಯಾನ್..!!! ➤ ಪೊಲೀಸರು ಕಂಗಾಲು

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಜೂ. 13. ಪೊಲೀಸರು ದಂಡ ಹಾಕಿದರೆಂದು ಕೋಪಗೊಂಡ
ಲೈನ್​ಮ್ಯಾನ್​ ಓರ್ವ ಠಾಣೆಯ ವಿದ್ಯುತ್​ ಸಂಪರ್ಕವನ್ನೇ ಕಡಿತಗೊಳಿಸಿರುವ ಘಟನೆ ಉತ್ತರಪ್ರದೇಶದ ಹರ್ದಸ್​ಪುರ್ ಪೊಲೀಸ್ ಠಾಣೆಯಲ್ಲಿ‌ ನಡೆದಿದೆ.

ಭಗವಾನ್​ ಸ್ವರೂಪ್ ಎಂಬ ಲೈನ್​ಮ್ಯಾನ್​ ಈ ಕೃತ್ಯ ಎಸಗಿದ್ದಾನೆ. ತಪಾಸಣಾ ನಿರತರಾಗಿದ್ದ ಪೊಲೀಸರು ಲೈನ್ ಮ್ಯಾನ್ ನ ಬೈಕ್ ನಿಲ್ಲಿಸಿ ದಾಖಲೆ ತೋರಿಸುವಂತೆ ಹೇಳಿದ್ದು, ದಾಖಲೆ ಕೊಡಲು ವಿಫಲನಾದ ಲೈನ್​ಮ್ಯಾನ್​ ಮನೆಗೆ ಹೋಗಿ ತರುವುದಾಗಿ ಹೇಳಿದ್ದರೂ ಕೇಳದ ಪೊಲೀಸರು 500 ರೂ. ದಂಡ ವಿಧಿಸಿದ್ದರು. ಇದರಿಂದ ತೀವ್ರ ಬೇಸರಗೊಂಡ ಲೈನ್​ಮ್ಯಾನ್​, ತನಗೆ ಗೊತ್ತಿರುವ ಸಿಬ್ಬಂದಿಯ ಬಳಿ ಹೇಳಿ ಠಾಣೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾನೆ ಎನ್ನಲಾಗಿದೆ. ಈ ಕುರಿತು ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿರುವ ಲೈನ್​ಮ್ಯಾನ್​, ಠಾಣೆಯಲ್ಲಿ ವಿದ್ಯುತ್ ಸಂಪರ್ಕವಿದ್ದರೂ ಮೀಟರ್ ಇರಲಿಲ್ಲ, ಹೀಗಾಗಿ ಅದು ಕಾನೂನುಬಾಹಿರ ಎಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದೇನೆ ಎಂದು ಹೇಳಿದ್ದಾನೆ.

Also Read   ಉಗ್ರರ ಒಳನುಸುಳುವಿಕೆ ಯತ್ನ ವಿಫಲ ➤ಓರ್ವ ಉಗ್ರನ ಹತ್ಯೆ

 

error: Content is protected !!
Scroll to Top