ಹಾವನ್ನು ರಕ್ಷಿಸಲು ಹೋಗಿ ನಾಲೆಗೆ ಬಿದ್ದ ಕಾರು ➤ ಪತ್ನಿ ಮೃತ್ಯು…!



(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಫೆ. 03. ರಸ್ತೆಯಲ್ಲಿ ಕಾರಿಗೆ ಅಡ್ಡ ಬಂದ ಹಾವನ್ನು ರಕ್ಷಿಸುವ ಭರದಲ್ಲಿ ಕಾರು ಪಕ್ಕದಲ್ಲಿದ್ದ ನಾಲೆಗೆ ಉರುಳಿಬಿದ್ದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.








ಮೃತ ಮಹಿಳೆಯನ್ನು ಸುಷ್ಮಾ ಎಂದು ಗುರುತಿಸಲಾಗಿದೆ. ಈಕೆಯ ಪತಿ ಚೇತನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರಿಬ್ಬರು ಅನಾರೋಗ್ಯದಿಂದಿದ್ದ ಪತ್ನಿಯ ಸುಷ್ಮಾಳ ತಾಯಿಯನ್ನು ನೋಡಲು ತುಮಕೂರಿಗೆ ತೆರಳುತ್ತಿದ್ದ ವೇಳೆ ರಸ್ತೆಗೆ ಅಡ್ಡಲಾಗಿ ಹಾವು ಬಂದಿದ್ದು, ಇದನ್ನು ತಪ್ಪಿಸಲು ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಕಾರು ನಾಲೆಗೆ ಹೋಗಿ ಬಿದ್ದಿದೆ. ಈ ಕುರಿತು ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top